ಕ್ಲಾಶಸ್ ಎದುರಾದಾಗ ನನಗೆ ಬೋರ್ ಆಗುತ್ತದೆ: ಶಾರೂಖ್

ಸೋಮವಾರ, 6 ಜುಲೈ 2015 (10:19 IST)
ಸಾಮಾನ್ಯವಾಗಿ ಇಬ್ಬರು ಸ್ಟಾರ್ ನಟರ ನಡುವೆ ಏನಿರುತ್ತದೆಯೋ ಗೊತ್ತಿಲ್ಲ. ಅವರ ಪಾಡಿಗೆ ಅವರು ಆರಾಮವಾಗಿರುತ್ತಾರೆ. ಆದರೆ ಜನ ಹಬ್ಬಿಸುವ ಸುದ್ದಿಗಳು ಮಾತ್ರ ಘನಘೋರವಾಗಿರುತ್ತದೆ. ಅದರಿಂದ ಕಲಾವಿದ ಬೇಸತ್ತು ನಾವು ನೀವು ತಿಳಿದಂತೆ ಇಲ್ಲ, ಒಳ್ಳೆಯ ಸ್ನೇಹಿತರು ಎನ್ನುವ ಮಾತನ್ನು ಜನರಿಗೆ ಹೇಳ ಬೇಕಾಗುತ್ತದೆ. ಇಂತಹ ವಾತಾವರಣ ಪ್ರತಿಯೊಂದು ಭಾಷೆಯ ಚಿತ್ರರಂಗದಲ್ಲೂ ಸಾಮಾನ್ಯ. 
ಬಾಲಿವುಡ್ ಕಿಂಗ್ ಖಾನ್  ಶಾರೂಖ್ ಖಾನ್  ಅವರ ನಟನೆಯ ರಯೀಸ್ ಮತ್ತು ಸಲ್ಮಾನ್ ಖಾನ್ ಅವರ ಅಭಿನಯದ ಸುಲ್ತಾನ್ ಚಿತ್ರ ನಡುವೆ ಜಟಾಪಟಿ ಉಂಟಾಗುತ್ತದೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಿಂದ   ಹೊರ ಬಂದಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಹಿಂದುಸ್ತಾನ್ ಟೈಮ್ಸ್  ಪತ್ರಿಕೆಯ ಸಂದರ್ಶದಲ್ಲಿ  ಎಸಾರ್ಕೆ, ಇಂತಹ ಕ್ಲಾಶಸ್  ಎದುರಾದಾಗ ನನಗೆ ಮಾತ್ರವಲ್ಲ  ಆಮೀರ್ ಮತ್ತು ಸಲ್ಮಾನ್ ಖಾನ್ ಗೂ  ಸಹಿತ ಬೋರ್ ಹೊಡೆಯುತ್ತದೆ. ನಾವೂ ಮೂರು ಜನ ಕಳೆದ ಅನೇಕ ವರ್ಷಗಳಿಂದ ಈ ವೃತ್ತಿರಂಗದಲ್ಲಿ ಇದ್ದೇವೆ.ನಾವು ಮೂರು ಜನ ಭಿನ್ನ ಮನಸ್ಥಿತಿಯನ್ನು ಹೊಂದಿರುವ  ಗೆಳೆಯರನ್ನು ಪಡೆದಿದ್ದೇವೆ ಎಂದಿದ್ದಾರೆ  ಶಾರೂಖ್ . 
 
ನಾವು ಮೂರು ಜನ ಖಾನ್ಸ್ ಇಂತಹ ಸಿನಿಮಾ ಕ್ಲಾಶಸ್  ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಅದು ನಿರ್ಮಾಪಕರ ಕೆಲಸ. ನಿರ್ಮಾಪಕರು  ರಯೀಸ್ ಮತ್ತು ಸುಲ್ತಾನ್ ಒಂದೆ ಸಮಯದಲ್ಲಿ ಬಿಡುಗಡೆ ಮಾಡಬೇಕೆಂದು ನಿರ್ಧಾರ ಮಾಡಿರುವಾಗ ನನ್ನ ಹಾಗೂ ಸಲ್ಮಾನ್ ಕಡೆಯಿಂದ ಯಾವ ಅಡ್ಡಿ ಇಲ್ಲ ಎಂದಿದ್ದಾರೆ ಎಸಾರ್ಕೆ. 

ವೆಬ್ದುನಿಯಾವನ್ನು ಓದಿ