ನಾನು ಏಕಾಂಗಿಯಾಗಿ ಇರಲು ಇಷ್ಟಪಡುತ್ತೇನೆ: ಕಂಗನಾ

ಗುರುವಾರ, 3 ಸೆಪ್ಟಂಬರ್ 2015 (09:41 IST)
ಸಿನಿಮಾ ತಾರೆಯರು ಅಂದ್ರೆ ಹಾಗೇನೇ.  ಅವರ ಹೆಸರು ಇತರೆ ನಟ ನಟಿಯರೊಂದಿಗೆ ಥಳುಕು ಹಾಕಿಕೊಳ್ಳೋದು ಸಾಮಾನ್ಯ. ನಟಿ ಕಂಗನಾ ಕೂಡ ಇದರಿಂದ ಹೊರತಾಗಿಲ್ಲ. ಈ ಹಿಂದೆ ಕಂಗನಾ ಹೆಸರು ಆದಿತ್ಯ ಪಾಂಚೋಲಿ ಹಾಗೂ ಆಧ್ಯನ್ ಸುಮನ್ ಜೊತೆ ಥಳುಕು ಹಾಕಿಕೊಂಡಿತ್ತು. ಸದ್ಯ ಕಂಗನಾ ಹೃತಿಕ್ ರೋಷನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಕೂಡ ಕೇಳಿ ಬರುತ್ತದೆ. ಆದರೆ ಕಂಗನಾ ಇದೆಲ್ಲಾ ಸುಳ್ಳು ಎಂದಿದ್ದಾರೆ.
ನಾನಿನ್ನು ಸಿಂಗಲ್ ಎಂದಿರುವ ಕಂಗನಾ, ಸದ್ಯ ನಾನು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾನೆ. ಸದ್ಯ ಯಾರೊಂದಿಗೂ ಸಂಬಂಧ ಹೊಂದುವಷ್ಟು ಸಮಯ ನನಗಿಲ್ಲ.  ಹಾಗಾಗಿ ನನ್ನ ಜೀವನದಲ್ಲಿ ಸದ್ಯ ಯಾರೂ ಪ್ರವೇಶವಾಗಿಲ್ಲ ಎಂದಿದ್ದಾರೆ. ಸಿನಿಮಾಗಳಲ್ಲೇ ನಾನು ಸಾಖಷ್ಟು ತೊಡಗಿಸಿದ್ದೇನೆ ಎಂದಿದ್ದಾರೆ.
 
ಸಂಬಂಧಗಳು ಮಗುವಿದ್ದಂತೆ ಎಂದಿರುವ ಕಂಗನಾ, ಒಂದು ಸಂಬಂಧವನ್ನು ಪುಟ್ಟು ಮಗುವಿನಂತೆ ಜೋಪಾನದಿಂದ ನೋಡಿಕೊಳ್ಳಬೇಕು.  ನಾನೀಗ ಕೆಲಸದಲ್ಲಿ ಬ್ಯುಸಿಯಿದದೇನೆ. ಈಗ ನಾನು ಯಾರನ್ನಾದರೂ ಪ್ರೀತಿಸಿದರೆ, ಕೆಲಸದ ಕಡೆ ಜಾಸ್ತಿ ಗಮನ ಕೊಡೋದಕ್ಕೆ ಆಗುವುದಿಲ್ಲ.ಒಂದು ವೇಳೆ ಕೆಲಸಕ್ಕೆ ಜಾಸ್ತಿ ಗಮನ ನೀಡಿದ್ರೆ ಅವರನ್ನು ನಿರ್ಲಕ್ಷಿಸಿದಂತಾಗುತ್ತೆ. ಹಾಗಾಗಿ ನನಗೆ ಸಿಂಗಲ್ ಆಗಿರೋದೇ ಇಷ್ಟ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ