ಮಗನ ಕರಿಯರ್ ವಿಷಯದಲ್ಲಿ ನಾನು ತಲೆ ಹಾಕಲ್ಲ-ಜಾಕಿಶ್ರಾಫ್

ಮಂಗಳವಾರ, 1 ಡಿಸೆಂಬರ್ 2015 (14:13 IST)
ನಾನು ಯಾವತ್ತೂ ನನ್ನ ಮಗನಿಗೆ  ಸಲಹೆಗಳನ್ನು ನೀಡೋದಿಲ್ಲ ಹಾಗೇ ಆತನ ಸಿನಿಮಾಗಳ ಆಯ್ಕೆ ವಿಚಾರದಲ್ಲಿ ನಾನು ಯಾವತ್ತೂ ಹಸ್ತಕ್ಷೇಪ ಮಾಡಲ್ಲ ಅಂತಾ ನಟ ಜಾಕಿಶ್ರಾಫ್ ಹೇಳಿದ್ದಾರೆ.ಆತ ತನ್ನ ಕೆಲಸಗಳನ್ನು ಚೆನ್ನಾಗಿ ಮಾಡುತ್ತಾನೆ ಅನ್ನೋ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.
 
ಟೈಗರ್ ಶ್ರಾಫ್ ತುಂಬಾನೇ ಶಿಸ್ತುಬದ್ಧ ಹುಡುಗ. ಅವನು ಅವನ  ಜೀವನದಲ್ಲಿ ಯಾವತ್ತೂ ಸರಿಯಾದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾನೆ. ನಾನು ಅವನನ್ನು ಅದೇ ರೀತಿ ಬೆಳೆಸಿದ್ದೇನೆ. ನಾನು ಯಾವತ್ತೂ ಅವನ ಸಿನಿ ಜೀವನದ ಬಗ್ಗೆ ಅವನನ್ನು ಪ್ರಶ್ನಿಸಿಲ್ಲ.ಇನ್ನು ಶಾಲಾ ದಿನಗಳಲ್ಲೂ ಆತನಿಗೆ ಯಾವುದೇ ರೀತಿಯ ಒತ್ತಡ ಹೇರಿರಲಿಲ್ಲ ಅಂತಾ ಅವರು ಹೇಳಿದ್ದಾರೆ.
 
ಈಗಲೂ ಅಷ್ಟೇ ನಾನು ಅವನಿಗೆ ಯಾವುದೇ ರೀತಿಯಲ್ಲೂ ಒತ್ತಡ ಹಾಕಲ್ಲ .ಅವನು ಎಲ್ಲವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗುತ್ತಾನೆ ಅನ್ನೋ ಧೈರ್ಯ ನನಗಿದೆ. ಹಾಗಾಗಿ ನಾನು ಅವನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ ಅಂತಾ ಅವರು ಹೇಳಿದ್ದಾರೆ.
 
ಸದ್ಯ ಟೈಗರ್ ಶ್ರಾಫ್ ಭಾಗಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.ಆಕ್ಷನ್ ಸಿನಿಮಾವಾದ ಭಾಗಿಯಲ್ಲಿ ಟೈಗರ್ ಗೆ ನಾಯಕಿಯಾಗಿ ಶ್ರದ್ಧಾ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ.ಇನ್ನು ಟೈಗರ್ ಮೊದಲ ಸಿನಿಮಾ ಹೀರೋಪಂಥಿಯಂತೂ ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗಿತ್ತು. ಭಾಗೀ ಸಿನಿಮಾದ ಮೇಲೂ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ.
 

ವೆಬ್ದುನಿಯಾವನ್ನು ಓದಿ