ನನ್ನನ್ನು ಯಾರು ಏನೇ ಅಂದರು ನಾನು ಹೀಗೆ ಇರ್ತೀನಿ ಎಂದು ನುಲಿದ ಪರಿಣಿತಿ

ಮಂಗಳವಾರ, 21 ಅಕ್ಟೋಬರ್ 2014 (13:02 IST)
ಬಾಲಿವುಡ್ ನಲ್ಲಿ ಮುದ್ದಾದ ಮುದ್ದು ತೆಳುವಾದ  ನಟಿಯರ ಪಟ್ಟಿಗೆ ಕರೀನ ಕಪೂರ್, ಕತ್ರಿನಾ ಕೈಫ್, ಅಲಿಯ ಭಟ್ ಹೆಸರು ಸೇರ್ಪಡೆ ಆಗುತ್ತದೆ. ತಮ್ಮ ತೆಳುವಾದ ಮೈಕಟ್ಟಿನ ಮೂಲಕ ಎಲ್ಲರ ಗಮನ ಸೆಳೆದ ನಟಿಯರು ಇವರು. ಅದೇರೀತಿ ತುಸು ದಪ್ಪ ಗಿದ್ದರು ತಮ್ಮದೇ ಆದ ಶೈಲಿಯಿಂದ ಗಮನ ಸೆಳೆದವರು ವಿದ್ಯಾ ಬಾಲನ್ ಮತ್ತು ಸೋನಾಕ್ಷಿ ಸಿನ್ಹ , ಪರಿಣಿತಿ ಚೋಪ್ರ.
 
ತುಸು ಹೆಚ್ಚೇ ದಪ್ಪಗಿರುವ ಪರಿಣಿತಿ ತೂಕ ಕಡಿಮೆ ಮಾಡಿಕೊಳ್ಳುವಂತೆ ಆಕೆಯ ಸ್ನೇಹಿತೆಯರು ಸಾಕಷ್ಟು ಬಾರಿ ಹೇಳುತ್ತಿದ್ದಾರೆ. ಆದರೆ ಆಕೆ ಆ ಬಗ್ಗೆ ಯಾವುದೇ ರೀತಿಯ ಪ್ರಯತ್ನ ಮಾಡಿಲ್ಲ.ಹೀಗೆ ಇದ್ದರೆ ನೀನು ಬಿಕನಿ ಯಾವ ರೀತಿ ಧರಿಸುತ್ತಿ ಎಂದು ಕೇಳಿದರೆ ನನಗೆ ಇನ್ನು ಆ ಅವಕಾಶ ಸಿಕ್ಕಿಲ್ಲ ಎಂದು ಹೇಳುತ್ತಾಳೆ.  
 
ಭವಿಷ್ಯದಲ್ಲಿ ಅಂತಹ ಅವಕಾಶ ಸಿಕ್ಕರೆ ತಾನು ಖಂಡಿತ ಬೇಡ ಅನ್ನಲ್ಲ, ಆಗ ಅದಕ್ಕೆ ಪೂರಕವಾಗಿ ಸಿದ್ಧ ಆಗ್ತೀನಿ. ಆದರೆ ಅಲ್ಲಿವರೆಗೂ ಹೀಗೆ ಇರ್ತೀನಿ ಎಂದು ಹೇಳಿದ್ದಾಳೆ ಈ ಚೆಲುವೆ. ಹೀಗೆ ದಪ್ಪಗಿರೋಕೆ ನನಗೆ ಇಷ್ಟ. ಪಿಜ್ಜಾ ತಿನ್ನದೇ ಇರಲಾರೆ. ಅದರಿಂದ ತೂಕ ಹೆಚ್ಚಾಗುತ್ತದೆ ಎಂದು ಗೊತ್ತು ನನಗೆ. ಆದರೆ ಚಪಲ ತಡೆಯೋಕೆ ಆಗಲ್ಲ. ಯಾರೇ ಆಗಲಿ ಕಷ್ಟ ಪಡೋದು ಯಾಕೆ ರುಚಿಯಾಗಿ ತಿಂದು ಇಷ್ಟ ಬಂದಂತೆ ಬದುಕಲು ಅಲ್ಲವೇ. ನನ್ನನ್ನು ಯಾರು ಏನೇ ಅಂದರು ನಾನು ಹೀಗೆ ಇರ್ತೀನಿ ಎಂದು ಹೇಳಿದ್ದಾಳೆ ಈ ಮುದ್ದು   ಬೆಡಗಿ..
 

ವೆಬ್ದುನಿಯಾವನ್ನು ಓದಿ