ನಾನು ಈಗ ಖುಷಿಯಾಗಿದ್ದೇನೆ.. ಸಾವಿನೊಂದಿಗೆ ಹೋರಾಡಿದ್ದೇನೆ..

ಗುರುವಾರ, 25 ಸೆಪ್ಟಂಬರ್ 2014 (14:27 IST)
ಸೌದಾಗರ್ ಚಿತ್ರದಲ್ಲಿ ಈಲು ಈಲು ಎಂದು ಹಾಡಿದ ಚೆಲುವೆ ಮೋನಿಷ ಕೊಯಿರಾಲ ಎನ್ನುವ ನೇಪಾಳಿ ಸುಂದರಿ ಅನೇಕ ಭಾರತೀಯ ಚಿತ್ರಗಳಲ್ಲಿ ನಟಿಸಿದರು. ಕೇವಲ ಬಾಲಿವುಡ್ ಮಾತ್ರವಲ್ಲ ದಕ್ಷಿಣ ಭಾರತದ ಚಿತ್ರಗಳಲ್ಲೂ ಸಹಿತ ನಟಿಸಿರುವ ಮೋನಿಷ ಉತ್ತಮ ಅಭಿನೇತ್ರಿ ಎನ್ನುವ ಬಗ್ಗೆ ಎರಡು ಮಾತಿಲ್ಲ. 
 
ತನ್ನ ವೃತ್ತಿ ಬದುಕಿನಲ್ಲಿ ಆದ ಏರುಪೇರಿಂದ ವೈವಾಹಿಕ ಬದುಕಿನತ್ತ ಆದ್ಯತೆ ನೀಡಿದ ಈ ಹೆಣ್ಣುಮಗಳು ತನಗಿಂತ ಹತ್ತು ವರ್ಷಗಳಷ್ಟು ಕಡಿಮೆ ವಯಸ್ಸಿನ ಯುವಕನ ಜೊತೆ ವಿವಾಹವಾದರು. ಆದರೆ ಆ ಬದುಕು ಎರಡು ದಿನವೂ ಸಹಿತ ನೆಲೆ ಕಾಣಲಿಲ್ಲ. ಇದರಿಂದ ಬೇಸತ್ತು ಹೊರ ಬಂದವರಿಗೆ ಧುತ್ತೆಂದು  ಎದುರಾಗಿ ಹೆದರಿಸಿದ್ದು ಕ್ಯಾನ್ಸರ್ ಕಾಯಿಲೆ.ಆಕೆಯು ಆ ಮಾರಣಾಂತಿಕ ಕಾಯಿಲೆಯ ಜೊತೆ ಹೋರಾಡಿ ಈಗ ಗೆದ್ದು ಬಂದಿದ್ದಾರೆ. 
 
ಪ್ರಸ್ತುತ ಜಿಮ್ ಹಾಗೂ ಸರಳ ಜೀವನ ಶೈಲಿ ಮೂಲಕ ಬದುಕನ್ನು ನಡೆಸುತ್ತಿದ್ದಾರೆ. ನಾನು ಸಾವಿನ ಮನೆಯ ಬಾಗಿಲನ್ನು ತಟ್ಟಿ ಬಂದಿದ್ದೇನೆ. ಈಗ ಎಲ್ಲವು ಸರಿ ಆಯ್ತು. ಆತ್ಮವಿಶ್ವಾಸದಿಂದ ಕ್ಯಾನ್ಸರ್ ವಿರುದ್ಧ ಜಯ ಗಳಿಸಿದ್ದೇನೆ. ದೇವರ ಪ್ರಾರ್ಥನೆ, ಧ್ಯಾನ, ಯೋಗ, ಫಿಟ್ನೆಸ್, ಶ್ರದ್ಧೆ ಮಿತಾಹಾರ ಇವು ಬದುಕಿನ ಮುಖ್ಯ ಭಾಗವಾಗಿದೆ. ದೇವರ ದಯೆಯಿಂದ ಆರಾಮವಾಗಿದ್ದೇನೆ. ಇನ್ನು ಮುಂದೆಯೂ ಸಹಿತ ಹೀಗೆ ಇರಲು ಇಷ್ಟ ಪಡುತ್ತೇನೆ. ನನ್ನ ಆರೋಗ್ಯದ ಬಗ್ಗೆ ಹಾರೈಸಿ.. ಹರಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದು ಟ್ವೀಟ್ ಮಾಡಿ ಹೇಳಿದ್ದಾರೆ.  
 

ವೆಬ್ದುನಿಯಾವನ್ನು ಓದಿ