ಪಿ.ಕೆ ಮೋಶನ್ ಪೋಸ್ಟರ್ ಯೂ ಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಆಮೀರ್ ಖಾನ್, ಅನುಷ್ಕ ಶರ್ಮ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಅನುಷ್ಕ ಬಂದಿದ್ದಾಳೆ ಎಂದು ಆಮೀರ್ ಟ್ವೀಟ್ ಮಾಡಿ ಅದರಲ್ಲಿ ಯೂ ಟೂಬ್ ಲಿಂಕ್ ನೀಡಿದ್ದಾರೆ.ಎ ದೇಖಾ .. ಹಮಾರ ಜಗ್ಗು .. ಟ್ರಾನ್ಸಿಸ್ಟರ್ ಕೆ ಸಾಥ್ ಎಂದು ಅದರಲ್ಲಿ ಬರೆದಿದ್ದಾರೆ. ಈ ಚಿತ್ರದಲ್ಲಿ ಅನುಷ್ಕ ಪಾತ್ರದ ಹೆಸರು ಜಗತ್ ಜನನಿ .
ಗೊಂದಲ ಆಯ್ತಾ ? ನಾನು ಪಿ.ಕೆ ಯಲ್ಲ . ನನ್ನ ಹೆಸರು ಜಗತ್ ಜನನಿ. ಹೌದು ಜಗತ್ ಜನನಿ ಎಂದು ಹೇಳಿದ್ದಾಳೆ ಅನುಷ್ಕ ಬೇಬಿ. ಆ ಬಳಿಕ ಈ ಇಬ್ಬರು ಜೈಲಿನಲ್ಲಿ ಇದ್ದಂತೆ, ಸೈಕಲ್ ಮೇಲೆ ಕುಳಿತಂತೆ ಮೋಶನ್ ಪೋಸ್ಟರ್ಸ್ ನೀಡಿದ್ದಾರೆ. ಆದರೆ ಈ ಚಿತ್ರದಲ್ಲಿ ಇವರಿಬ್ಬರ ಪಾತ್ರ ಎಂತಹದ್ದು ಎನ್ನುವುದು ಮಾತ್ರ ಇನ್ನು ತಿಳಿದಿಲ್ಲ.