ನಾವಿಬ್ಬರು ಸಹಜೀವನ ಮಾಡೋದಾ? ಛೆ ಛೆ !

ಗುರುವಾರ, 9 ಅಕ್ಟೋಬರ್ 2014 (13:19 IST)
ಇಂತಹ ಮಾತುಗಳನ್ನು ಬೇರೆ ಯಾವುದಾದರು ಕಲಾವಿದೆಯ ಬಾಯಿಂದ ಕೇಳಿದ್ದಿದ್ದರೆ ಏನು ಅನ್ನಿಸುತ್ತಿರಲಿಲ್ಲ ಎಂದು ಕಾಣುತ್ತೆ.. ಆದರೆ  ಬಿಪಾಸ ಹೇಳಿದಾಗ ಮಾತ್ರ ಎಲ್ಲರು ಆಕೆಯತ್ತ ತಿರುಗಿ ನೋಡುವಂತೆ ಆಗಿದೆ. 
 
ಮುಖ್ಯವಾಗಿ ಆಕೆ ಜಾನ್ ಅಬ್ರಹಾಂ ಜೊತೆ ಬೋಬ್ಬರಿ ಏಳು ವರ್ಷಗಳ ಕಾಲ ಸಹಜೀವನ ಮಾಡಿದ್ದು ಅಲ್ಲದೆ, ಆ ಬಳಿಕ ಬಿಟ್ಟು ಬೇರೆಯಾಗಿದ್ದು, ಜಾನ್  ಬೇರೆ ಹುಡುಗಿಯನ್ನು ಮದುವೆ ಆಗಿದ್ದು ಎಲ್ಲವು ಸಹಿತ ಗೊತ್ತೇ ಇದೆ. ಅಂತಹ ಹೆಣ್ಣು ಈ ಮಾತು ಹೇಳಿದರೆ ಆಶ್ಚರ್ಯ ಆಗುವುದಿಲ್ಲವೇ? ಈಗ ಹರ್ಮನ್ ಬವೇಜ ಜೊತೆಗೆ ಪ್ರೇಮ ನಡೆಸುತ್ತಿರುವ ಬಿಪಾಸ ಬಸು ಬಳಿ ನೀವಿಬ್ಬರು ಸಹಜೀವನ ಮಾಡುತ್ತೀದ್ದಿರಾ ಎಂದು ಪತ್ರಕರ್ತರು   ಕೇಳಿದ ಪ್ರಶ್ನೆಗೆ ನಾವಿಬ್ಬರು ಸಹಜೀವನ ಮಾಡುವುದೇ? ಛೆ ಛೆ ! ಕೆಲವು ದಿನಗಳ ಬಳಿಕ ಸಹಜೀವನ ಮಾಡಿ ಆನಂತರ  ಮದುವೆ ಆದರೆ ಯಶಸ್ವಿ ವೈವಾಹಿಕ ಬದುಕನ್ನು ನಡೆಸ ಬಹುದು ಎಂದು ತಿಳಿಯುವುದು ಸರಿಯಲ್ಲ. ಮದುವೆಗೆ ಬೇಕಾಗಿರುವುದು ಒಬ್ಬರನ್ನೊಬ್ಬರು ಅರಿತು ಬಾಳುವ ಗುಣ. ವಿವಾಹ ಬಂಧ ಗಟ್ಟಿಯಾಗಿ ಇರ ಬೇಕೆಂದರೆ ಗಂಡ ಹೆಂಡಿರ ನಡುವೆ ಉತ್ತಮ ತಿಳುವಳಿಕೆ  ಅತ್ಯಗತ್ಯ. 
 
ನನ್ನ ಅಪ್ಪ ಅಮ್ಮ ವೈವಾಹಿಕ ಬದುಕು ಸೂಪರ್ ಸಕ್ಸಸ್ ಆಗಿದೆ. ನನ್ನ ವೈವಾಹಿಕ ಬದುಕು ಸಹಿತ ಅದೇರೀತಿ ಇರ ಬೇಕು ಎಂದು ಬಯಸುತ್ತೇನೆ. ಆದ್ದರಿಂದ ನಾನು ಸಹಜೀವನಕ್ಕೆ ಎಂದಿಗೂ ಆದ್ಯತೆ ನೀದಲ್ಲ ಎಂದು ಹೇಳಿದ್ದಾಳೆ. ಒಂದು ಬಾರಿ ಸಹಜೀವನ ನೀಡಿದ ಕೆಟ್ಟ ಅನುಭವ ಈ ರೀತಿ ಮಾತನಾಡಿಸಿರ ಬಹುದು . ಸಧ್ಯದಲ್ಲೇ ಹರ್ಮನ್ ಕೈಲಿ ತಾಳಿ ಕಟ್ಟಿಸಿಕೊಳ್ಳುವ ಸಿದ್ಧತೆಯಲ್ಲಿದ್ದಾಳೆ ಈ ಚೆಲುವೆ. ಈ ಸಂಗತಿಯನ್ನು  ಅಧಿಕೃತವಾಗಿ ತಿಳಿಸ ಬೇಕು ಎಂದು ಬಯಸುತ್ತಿದ್ದಾರೆ ಈ ಜೋಡಿ..ಶುಭವಾಗಲಿ!
 
 

ವೆಬ್ದುನಿಯಾವನ್ನು ಓದಿ