ಆತ ಕೇಳಿದರೆ ನಾನು ಏನನ್ನು ಬೇಕಾದರೂ ನೀಡಲು ಸಿದ್ಧ: ತಬು

ಬುಧವಾರ, 8 ಜುಲೈ 2015 (10:30 IST)
ತಬು ಬಾಲಿವುಡ್ ಮಾತ್ರವಲ್ಲ ತೆಲುಗು ಚಿತ್ರರಂಗದಲ್ಲೂ ಸಹಿತ ಹೆಚ್ಚು ಯಶಸ್ವಿ ಪಡೆದ ನಟಿ. ಆಕೆ ವೆಂಕಟೇಶ್ ಅವರ ಜೊತೆ ಕೂಲಿ ನಂ 1 ಸಿನಿಮಾದಲ್ಲಿ ಹಸಿಬಿಸಿಯಾಗಿ ನಟಿಸಿ ತೆಲುಗು ಜನರನ್ನು ತನ್ನತ್ತ ಸೆಳೆದಿದ್ದರು. ಅದಾದ ಬಳಿಕ ಆಕೆ ನಾಗಾರ್ಜುನ್ ಜೊತೆ ನಿನ್ನೆ ಪೆಳ್ಳಾಡುತಾ ಸೇರಿದಂತೆ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದರು. ನಂತರ ಆಕೆ ಹೆಚ್ಚು ಕೇಂದ್ರೀಕರಿಸಿದ್ದು ಬಾಲಿವುಡ್ ಚಿತ್ರಗಳ ಕಡೆಗೆ!
ಈಗ ಆಕೆ ಮಲೆಯಾಳಂ ರೀಮೇಕ್ ಚಿತ್ರ ದೃಶ್ಯಂ ನಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಈಗ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ಮಾಚಿಸ್ ಖ್ಯಾತಿಯ ಸುಂದರಿ ತಬು ಪೊಲೀಸ್ ಅಧಿಕಾರಿಣಿಯ ಪಾತ್ರಧಾರಿಯಾಗಿದ್ದಾರೆ. ಅಜಯ್ ದೇವಗನ್, ಶ್ರಿಯ ಅಭಿನಯದ ಈ ಚಿತ್ರದಲ್ಲಿ ಈಕೆಯದ್ದು ಮುಖ್ಯ ಪಾತ್ರ. 
 
ಅಜಯ್ ನನ್ನ ಬಾಲ್ಯ ಸ್ನೇಹಿತ. ಆತನ ಜೊತೆ ನನಗೆ ಉತ್ತಮ ಬಾಂಧವ್ಯವಿದೆ. ಈ ಚಿತ್ರದಲ್ಲಿ ಪೊಲೀಸ್ ಪಾತ್ರಧಾರಿಯಾಗಲು ಆತ ನನ್ನನ್ನು ಕೇಳಿದರು.ಅವರು ಕೇಳಿದ್ದಕ್ಕೆ ಇಲ್ಲ ಎನ್ನಲಾಗಲಿಲ್ಲ. ಅಷ್ಟೇ ಅಲ್ಲ ಅಜಯ್ ಏನೇ ಕೇಳಿದರೂ ನಾನು ನೀಡಲು ಸಿದ್ಧ ಎಂದಿದ್ದಾರೆ ತಬು. 
 
ಈ ಹಿಂದೆ ನಾವಿಬ್ಬರು ವಿಜಯ್ ಪಥ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದೆವು. ಇಷ್ಟು ವರ್ಷಗಳ ಬಳಿಕ ಪುನಃ ಒಟ್ಟಿಗೆ ನಟಿಸುತ್ತಿದ್ದೇವೆ.ಮುಖ್ಯವಾಗಿ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸದೆ ಹೋದರು ಸಹ ನಾವು ಪಾರ್ಟಿಗಳಲ್ಲಿ ಭೇಟಿ ಆಗುತ್ತೇವೆ. ಅಲ್ಲಿ ನಾವು ಮಾಡುವ ಗಲಾಟೆ ಗದ್ದಲವನ್ನು ನೋಡಿಕೊಂಡು ಇದ್ದು ಬಿಡ್ತಾರೆ ಎಂದಿದ್ದಾರೆ ಈ ತಾರೆ. 

ವೆಬ್ದುನಿಯಾವನ್ನು ಓದಿ