ನನ್ನನ್ನು ಮುಟ್ಟಿದರೆ ನಾನು ಸುಮ್ಮನೆ ಇರಲ್ಲ: ಶೃತಿ

ಶನಿವಾರ, 13 ಡಿಸೆಂಬರ್ 2014 (09:51 IST)
ಇದು ಅತ್ಯಂತ ಖೇದಕರ ಸಂಗತಿ ಎಂದು ಹೇಳಿದ್ದಾಳೆ ನಟಿ ಶೃತಿ ಹಾಸನ್. ಆಕೆ ಯಾವ ಬಗ್ಗೆ ಖೇದ ವ್ಯಕ್ತ ಪಡಿಸುತ್ತಿದ್ದಾಳೆ   ಎನ್ನುವ ಸಂಗತಿ ಓದಿದಾಗ ನಿಮಗೂ ಸಹಿತ ಖೇದ   ಅನ್ನಿಸದೆ ಇರದು ಆಕೆಯ ವರ್ತನೆಯ ಬಗ್ಗೆ . ಕೇವಲ ಕಾಲಿವುಡ್ ಮಾತ್ರವಲ್ಲ ಟಾಲಿವುಡ್ ಜೊತೆಗೆ ಬಾಲಿವುಡ್ ನಲ್ಲಿಯೂ ಸಹಿತ ಸ್ಥಾನ ಪಡೆದಿರುವ ಶ್ರುತಿ ಹಾಸನ್ ಹೆಣ್ಣು ಮಕ್ಕಳಿಗೆ ವಿಶ್ವದಲ್ಲಿ ಲಾಸ್ ಎಂಜಲೀಸ್ ಹೊರೆತು ಪಡಿಸಿದರೆ ಮತ್ತೆಲ್ಲೂ ಸುರಕ್ಷಿತೆ ಇಲ್ಲ ಎಂದು ಹೇಳಿದ್ದಾಳೆ. 
ಆಕೆಯ ಪ್ರಕಾರ ಸಮಾನತೆ  ಅದೂ ಇದು ಎಂದು ಹೇಳುವ ಯಾರಲ್ಲೂ ಸ್ತ್ರೀಯರಿಗೆ ಸಮಾನತೆ ಹಾಗೂ ಸಂರಕ್ಷಣೆ ನೀಡುವ ಬಗ್ಗೆ ಆಸಕ್ತಿ ಇಲ್ಲ. ಸ್ತ್ರೀ ವಾದವೆಂದರೆ ಗಂಡು ಮಕ್ಕಳ  ಮೇಲೆ ಜೋರು ಮಾಡುವುದು , ಅವರನ್ನು ಹಿಯ್ಯಾಳಿಸುವುದು ಎಂದಲ್ಲ, ಬದಲಿಗೆ ಅವರು ಸರಿಯಾದ ವರ್ತನೆ ತೋರದೆ ಇದ್ದಾರೆ ಆಗ ಅವರ ಮೇಲೆ ಟಾರ್ಗೆಟ್ ಮಾಡಿ ನ್ಯಾಯಪಡೆಯುವುದು. 
 
ಈ ಅಂಶಗಳು ತನ್ನ ತಾಯಿ ಸಾರಿಕಾಳಿಂದ ತನಗೆ ದೊರೆತಿದೆ ಎಂದು ಹೇಳಿದ್ದಾಳೆ ಈ ಚೆಲುವೆ. ಅಷ್ಟೇ ಅಲ್ಲದೆ ಪುರುಷರು ತನ್ನ ಜೊತೆಯ ವರ್ತನೆ ಸರಿಯಾಗಿ ಇಲ್ಲದೆ ಇದ್ದರೆ ತಾನು ಪ್ರತಿಭಟಿಸುವ ರೀತಿಯು ಸಹ ಪರಿಣಾಮಕಾರಿಯಾಗಿ ಇರುತ್ತದೆ ಎಂದು ಹೇಳಿದ್ದಾಳೆ. ಆದರೆ ಈ ರೀತಿ ಇದ್ದಕ್ಕಿದ್ದ ಹಾಗೆ ಪುರುಷರ ಮೇಲೆ ಮೀಡಿಯಾಗಳ ಮುಂದೆ ಯಾಕಿಂತಹ ಬ್ರಹ್ಮಾಸ್ತ್ರ  ಎಸೆಯುತ್ತಿದ್ದಾಳೆ  ಎಂದು ಮೀಡಿಯಾ ಮೇಲಾಣೆ ನಮಗಿನ್ನು ಗೊತ್ತೇ ಆಗಿಲ್ಲ.

ವೆಬ್ದುನಿಯಾವನ್ನು ಓದಿ