ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಲ್ಲ ಎಂದಿದ್ದ ಇಲಿಯಾನ ಮತ್ತೆ ದಕ್ಷಿಣದೆಡೆಗೆ...!

ಶುಕ್ರವಾರ, 30 ಜನವರಿ 2015 (09:43 IST)
ದಕ್ಷಿಣ ಭಾರತದ ಸಿನಿಮಾಗಳಲ್ಲಿ ಇನ್ನೆಂದಿಗೂ ನಟಿಸಲ್ಲ ಎಂದು ಬಾಲಿವುಡ್ ಕಡೆಗೆ ಹೋದ ಗೋವಾ ಚೆಲುವೆ ಇಲಿಯಾನ ಪುನಃ ತೆಲುಗು ಚಿತ್ರರಂಗಕ್ಕೆ ಬಂದಿದ್ದಾಳೆ. ಇದೇನಿದು ಇನ್ನೆಂದಿಗೂ ಬರಲ್ಲ ಎಂದಾಕೆ ಮತ್ತೆ ಬಂದಿದ್ದಾಳೆ ಎನ್ನುವ ಆಶ್ಚರ್ಯ ನಿಮಗಾಗುವುದು ಸಹಜ. ಚಿಂತೆ ಮಾಡದಿರಿ ಅವರ ವಿಷಯವೇ ಹಾಗೆ, ತಮಗೆ ಏನು ಅನ್ನಿಸುತ್ತದೆಯೋ ಹಾಗೆ ಮಾಡೋದು. ಹಿಂದಿನದ್ದೆಲ್ಲಾ ಮರೆತು ಬಿಡುವ ಮಂದಿ ಅವರು. ಇಲಿ ಬೇಬಿ ವಿಷಯದಲ್ಲೂ ಸಹಿತ ಹಾಗೆ ಆಗಿದೆ. ಈಗ ಆಕೆ ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಾ ಜೊತೆಗೆ ಜಾಹೀರಾತುಗಳಲ್ಲು ಸಹಿತ ಕಾಣಿಸಿ ಕೊಳ್ಳುತ್ತಿದ್ದಾಳೆ. 
ದಕ್ಷಿಣ ಭಾರತದ  ಪ್ರಸಿದ್ಧ ನಿರ್ದೇಶಕ - ನಿರ್ಮಾಪಕರು ತಮ್ಮ  ಸಿನಿಮಾಗಳಲ್ಲಿ ನಟಿಸು ಬಾರಮ್ಮ  ಆಗಲ್ಲ ಎಂದು ಹೇಳುತ್ತಿದ್ದಳು, ಆದರೆ ಈಗ ವಾತಾವರಣ  ಸ್ವಲ್ಪ ಬದಲಾಗಿದೆ, ಇಲಿಯಾನ  ಈಗ ಪ್ರಶಾಂತ್   ಹೀರೋ ಆಗಿ ಅಭಿನಯಿಸುತ್ತಿರುವ ಮುಂದಿನ ಚಿತ್ರಕ್ಕೆ ಹೀರೋಯಿನ್ ಆಗುತ್ತಿದ್ದಾಳೆ. ಆ ಚಿತ್ರವನ್ನು  ಪ್ರಶಾಂತ್ ತಂದೆ ಹಾಗೂ ಒಂದು ಕಾಲದ ಸೂಪರ್  ಸ್ಟಾರ್ ಆಗಿದ್ದ ತ್ಯಾಗರಾಜ್ ಅವರ ನಿರ್ದೇಶನದ ಚಿತ್ರಕ್ಕೆ ಆಯ್ಕೆ ಆಗಿದ್ದಾಳೆ. ತೆಲುಗು ಸಿನಿಮಾ ಜುಲಾಯಿ ರೀಮೇಕ್ ಚಿತ್ರದಲ್ಲಿ ಆಕೆ ಅಭಿನಯಿಸುತ್ತಿದ್ದಾಳೆ. ಇದು ಸದ್ಯದಲ್ಲೇ ತನ್ನ ಕೆಲಸ ಆರಂಭ ಮಾಡಲಿದೆ. ಈ ಚಿತ್ರದ ನಟನೆಗೆಂದು ಏಕೆ ಸಿಕ್ಕಾಪಟ್ಟೆ ಸಂಭಾವನೆ ಪಡೆದಿದ್ದಾಳೆ ಎನ್ನುವುದು ಸದ್ಯದ ಸುದ್ದಿ, ಆದರೆ ಎಷ್ಟು ಎನ್ನುವುದು ಮಾತ್ರ ಯಾರಿಗೂ ಗೊತ್ತಿಲ್ಲ.
 

ವೆಬ್ದುನಿಯಾವನ್ನು ಓದಿ