ರಜನೀಕಾಂತ್ ಸಿನಿಮಾ ಕೂಲಿಗೆ ಲೀಗಲ್ ನೋಟಿಸ್ ಕೊಟ್ಟ ಇಳಯರಾಜ

Krishnaveni K

ಗುರುವಾರ, 2 ಮೇ 2024 (10:17 IST)
ಚೆನ್ನೈ: ರಜನೀಕಾಂತ್ ನಾಯಕರಾಗಿ ನಟಿಸುತ್ತಿರುವ ಕೂಲಿ ಸಿನಿಮಾ ತಂಡಕ್ಕೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಕೂಲಿ ಸಿನಿಮಾಗೆ ಅನಿರುದ್ಧ ಸಂಗೀತ ಸಂಯೋಜಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು.  ಈ ಟೀಸರ್ ನಲ್ಲಿ ಇಳಯರಾಜ ಸಂಗೀತ ಸಂಯೋಜಿಸಿದ್ದ ವಾ ವಾ ಪಾಕಂ ವಾ ಹಾಡನ್ನು ರಿಮಿಕ್ಸ್ ಮಾಡಿ ಬಳಸಲಾಗಿತ್ತು. ಆದರೆ ಈ ಹಾಡು ಬಳಕೆ ಮಾಡಲು ಇಳಯರಾಜ ಒಪ್ಪಿಗೆ ಪಡೆದಿರಲಿಲ್ಲ.

ಈ ಕಾರಣಕ್ಕೆ ಅನುಮತಿಯಿಲ್ಲದೇ ಹಾಡಿನ ತುಣುಕು ಬಳಸಿಕೊಂಡಿದ್ದಕ್ಕೆ ಇಳಯರಾಜ ಚಿತ್ರತಂಡಕ್ಕೆ ನೋಟಿಸ್ ನೀಡಿದ್ದಾರೆ. ಕೂಲಿ ಸಿನಿಮಾ ಲೋಕೇಶ್ ಕನಗರಾಜು ನಿರ್ದೇಶನದ ಸಿನಿಮಾ. ಈ ಹಿಂದೆ ಅವರೇ ನಿರ್ದೇಶನ ಮಾಡಿದ್ದ ವಿಕ್ರಂ ಸಿನಿಮಾದಲ್ಲೂ ಇಳಯರಾಜ ಹಾಡು ಬಳಸಿ ವಿವಾದಕ್ಕೊಳಗಾಗಿದ್ದರು.

ಇದೀಗ ಮತ್ತೊಮ್ಮೆ ಅದೇ ತಪ್ಪು ಮಾಡಿದ್ದಾರೆ. ಆದರೆ ಈ ಬಾರಿ ಇಳಯರಾಜ ನೋಟಿಸ್ ನೀಡಿದ್ದಾರೆ. ಇದೀಗ ಲೋಕೇಶ್ ಒಂದೋ ತಮ್ಮ ಸಿನಿಮಾ  ಟೀಸರ್ ನಿಂದ ಹಾಡು ಕಿತ್ತು ಹಾಕಬೇಕು ಇಲ್ಲವೇ ಇಳಯರಾಜಗೆ ನಷ್ಟಪರಿಹಾರ ಕೊಡಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ