ಐಟಂ ಸಾಂಗ್ ನಲ್ಲಿ ಇಮ್ರಾನ್ ಹಶ್ಮಿ ಜೊತೆ ಮೈಮಾಟ ತೋರುತ್ತಿರುವ ಶ್ರದ್ಧಾ ಕಪೂರ್

ಶುಕ್ರವಾರ, 31 ಅಕ್ಟೋಬರ್ 2014 (13:13 IST)
ಶ್ರದ್ಧಾ ಕಪೂರ್ ಬಾಲಿವುಡ್ ನ ಭರವಸೆಯ ನಟಿ. ತನ್ನನ್ನು ಅನೇಕ ರೀತಿಯಲ್ಲಿ ತೊಡಗಿಸಿ ಕೊಳ್ಳುವ ಆಶಯ ಹೊಂದಿರುವ ಈ ಚೆಲುವೆ ಈಗ ಮತ್ತೊಂದು ಹೊಸ ರೂಪದ ಮೂಲಕ ಜನರ ಮುಂದೆ ಬರಲು ಸಿದ್ಧತೆ ನಡಿಸಿದ್ದಾಳೆ. 
 
ಶ್ರದ್ಧಾ ಕಪೂರ್ ಹೈದರ್ ಸಿನಿಮಾ ಹೀರೋಯಿನ್, ಆಶಿಕಿ 2  ಚಿತ್ರದ ತಾರೆ ಈಗ ಬಾಲಿವುಡ್ ನಲ್ಲಿ ತನ್ನ ಪ್ರತಿಭೆಯಿಂದ ಗುರುತಿಸಿಕೊಂಡಿರುವ ಚೆಲುವೆ.ಸಾಮಾನ್ಯವಾಗಿ ಆರಂಭದಿಂದಲೂ ಸಿಕ್ಕ ಪಾತ್ರದತ್ತ ಕೈ ಚಾಚುವ ಗುಣ ಹೊಂದಿರದ ಶ್ರದ್ಧಾ ಈಗ ತನ್ನ ಹೊಸ ಅವತಾರ ತೋರಲು ಸಿದ್ಧತೆ ನಡೆಸಿದ್ದಾಳೆ. 
 
ಆಕೆಯ ಹೊಸ ಅವತಾರ ಎಂದರೆ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುವುದು. ಇಮ್ರಾನ್ ಹಶ್ಮಿ , ಕಂಗನ ರನೌಟ್  ಅವರ ಜೋಡಿಯಲ್ಲಿ ಸಿದ್ಧ ಆಗುತ್ತಿರುವ ಕರಣ್ ಜೋಹರ್ ನಿರ್ಮಾಣದ ಉಂಗ್ಲಿ ಚಿತ್ರದಲ್ಲಿ ಆಕೆ ಐಟಂ ನಂಬರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಇದರಲ್ಲಿ ಬಸಂತಿಯಾಗಿ ಐಟಂ ನಂಬರ್ ನಲ್ಲಿ ಕಾಣಿಸಿಕೊಳ್ಳುತ್ತಾ ಹರೆಯದ ಹೃದಯಗಳನ್ನು ವಿಲವಿಲ ಗುಟ್ಟಿಸುವ  ಹುನ್ನಾರ ಮಾಡಿದ್ದಾಳೆ. 
 
ಆರಂಭದಲ್ಲಿ ಈ ಹಾಡಿಗೆ ಸನ್ನಿ ಲಿಯೋನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇಮ್ರಾನ್ ಆಕೆಯ ಜೊತೆ ನಟಿಸಲು ಇಷ್ಟ ಪಟ್ಟಿರಲಿಲ್ಲ. ಆದರೆ ಈಗ ಆ ಜಾಗಕ್ಕೆ ಶ್ರದ್ಧಾ ಬಂದಿದ್ದಾಳೆ. ಈ ಚಿತ್ರದ ನಿರ್ದೇಶನದ ಹೊಣೆ ರೆನ್ಸಿಲ್ ಡಿಸೆಲ್ವ ಹೊತ್ತಿದ್ದಾರೆ. ಈ ಹಾಡಿನ ಕೊರಿಯೋಗ್ರಫಿ ಮಾಡಿದ್ದಾರೆ ಬಾಸ್ಕೊ ಸಿಸರ್. ಇಷ್ಟು ದಿನ ಆಕೆಯ ಪ್ರತಿಭೆಯನ್ನು ಕಂಡವರಿಗೆ ಈಗ ಬಸಂತಿ ರೂಪದಲ್ಲಿ ಗ್ಲಾಮರ್ ನೋಡುವ ಖುಷಿ.
 
 
 
 

ವೆಬ್ದುನಿಯಾವನ್ನು ಓದಿ