ಇಮ್ತಿಯಾಜ್ ನನ್ನ ನಿಜವಾದ ಗೆಳೆಯ- ರಣ್ ಬೀರ್ ಕಪೂರ್

ಬುಧವಾರ, 25 ನವೆಂಬರ್ 2015 (09:55 IST)
2011ರಲ್ಲಿ ತೆರೆಕಂಡ ರಾಕ್ ಸ್ಟಾರ್ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ರಣ್ ಬೀರ್ ಕಪೂರ್ ಹಾಗೂ ಇಮ್ತಿಯಾಜ್ ಅಲಿ ಮತ್ತೆ ಜೊತೆಯಾಗಿ ಕೆಲಸ ಮಾಡಿರುವ ಸಿನಿಮಾ ತಮಾಷಾ. ರಾಕ್ ಸ್ಟಾರ್ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದಲ್ಲಿನಿಂದ ಇಮ್ತಿಯಾಜ್ ಹಾಗೂ ರಣ್ ಬೀರ್ ಉತ್ತಮ ಗೆಳೆಯರಂತೆ. ಹಾಗಂಥಾ ಹೇಳಿರೋದು ಬೇರ್ಯಾರು ಅಲ್ಲ. ನಟ ರಣ್ ಬೀರ್ ಕಪೂರ್.

ರಣ್ ಬೀರ್ ಜೀವನದ ನಿಜವಾದ ಗೆಳೆಯರಲ್ಲಿ ಇಮ್ತಿಯಾಜ್ ಅಲಿ ಪ್ರಮುಖರಂತೆ. ಗೆಳೆಯ ಅಂತ ಕರೆಸಿಕೊಳ್ಳಲು ಸೂಕ್ತವಾದ ವ್ಯಕ್ತಿ ಅಂದ್ರೆ ಅದು ಇಮ್ತಿಯಾಜ್ ಅಂತಾ ರಣ್ ಬೀರ್ ಹೇಳಿದ್ದಾರೆ.ಅವರಲ್ಲಿ ಉತ್ತಮ ಗೆಳೆತನಕ್ಕೆ ಬೇಕಾದ ಎಲ್ಲಾ ಗುಣಗಳಿವೆ ಎಂದು ರಣ್ ಬೀರ್ ಹೇಳಿದ್ದಾರೆ. ಇನ್ನು ತಮಾಷಾ ಸಿನಿಮಾದಿಂದಾಗಿ ಅವರಿಬ್ಬರ ಗೆಳೆತನ ಇನ್ನೂ ಗಟ್ಟಿಯಾಗಿದೆಯಂತೆ.
 
ಸದ್ಯ ತಮಾಷಾ ಸಿನಿಮಾ ತಂಡ ಚಿತ್ರದ ಪ್ರಮೋಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಸಿನಿಮಾದಲ್ಲಿ ರಣ್ ಬೀರ್ ಹಾಗೂ ದೀಪಿಕಾ  ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಾಷಾ ಸಿನಿಮಾವನ್ನು ಸಾಜಿದ್ ನಾಡಿಯವಾಲಾ ನಿರ್ಮಿಸಿದ್ದು, ನವೆಂಬರ್ 27 ರಂದು ಸಿನಿಮಾ ರಿಲೀಸ್ ಆಗುತ್ತಿದೆ.

ವೆಬ್ದುನಿಯಾವನ್ನು ಓದಿ