ಚಿರಂಜೀವಿ ಸರ್ಜಾ ಕುಟುಂಬದವರಿಗೆ ಕ್ಷಮೆ ಕೇಳಿದ ಇಂದ್ರಜಿತ್ ಲಂಕೇಶ್

ಶನಿವಾರ, 5 ಸೆಪ್ಟಂಬರ್ 2020 (20:06 IST)
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಲಿಂಕ್ ಹೊರಬರುವುದಕ್ಕೆ ಸಹಕಾರ ನೀಡಿದ ನಿರ್ದೇಶಕ, ನಿರ್ಮಾಪಕ ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
 

ಪರೋಕ್ಷವಾಗಿ ಚಿರಂಜೀವಿ ಸರ್ಜಾ ಅವರ ಸಾವಿಗೆ ಡ್ರಗ್ಸ್ ಮಾಫಿಯಾ ಜೊತೆ ಸಂಬಂಧ ಕಲ್ಪಿಸಿ ಇಂದ್ರಜಿತ್ ಲಂಕೇಶ್ ಈ ಹಿಂದೆ ನೀಡಿದ್ದ ಹೇಳಿಕೆ ಕುರಿತು ಚಿರು ಮನೆಮಂದಿಯ ಕ್ಷಮೆಯಾಚನೆ ಮಾಡಿದ್ದಾರೆ.
 

ಸ್ಯಾಂಡಲ್ ವುಡ್ ನ್ನು ಒಂದಷ್ಟು ಮಂದಿ ಹಾಳು ಮಾಡುತ್ತಿದ್ದಾರೆ. ಡ್ರಗ್ಸ್ ವಿರುದ್ಧ ಹೋರಾಟ, ಕೆಲಸ ಮಾಡುತ್ತಿರುವ ಪೊಲೀಸರಿಗೆ ಸೆಲ್ಯೂಟ್ ಹೊಡೆಯೋದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ