ಸನ್ನಿ ಲಿಯೋನ್ ಸೆಕ್ಸ್ ಕಾಮಿಡಿ ಚಿತ್ರದಲ್ಲಿ ಸಂದೇಶವೂ ಇದೆಯಂತೆ..?!

ಶುಕ್ರವಾರ, 6 ಮಾರ್ಚ್ 2015 (10:11 IST)
ಇಂಟರ್ ನೆಟ್‌ನಲ್ಲಿ ಕದ್ದುಮುಚ್ಚಿ ನೋಡುವುದಕ್ಕೆ ಹೆದರದ ಜನರು ಸೆನ್ಸಾರ್ ನವರು ಸಮ್ಮತಿಸಿರುವ ಸಿನಿಮಾ ವೀಕ್ಷಿಸಲು ಏಕೆ ಹಿಂಜರಿಯುತ್ತಾರೆ ಎನ್ನುವ ಪ್ರಶ್ನೆಯನ್ನು ವೀಕ್ಷಕರಿಗೆ ಹಾಕಿದ್ದಾಳೆ ಪೋರ್ನ್ ಸ್ಟಾರ್ ಸನ್ನಿ ಲಿಯೋನ್. ಈಗ ಆಕೆ ನಟಿಸುತ್ತಿರುವ ಕುಚ್ ಕುಚ್ ಲೋಚಾ ಹೈ ಸಿನಿಮಾ ಸೆಕ್ಸಿ ಕಾಮಿಡಿ  ಅಂಶಗಳನ್ನು ಒಳಗೊಂಡಿದೆ. ಆದರೆ ಅದು ಕುಟುಂಬ ಸಮೇತರಾಗಿ ಬಂದು ನೋಡುವ ಚಿತ್ರವಾಗಿದೆ. ಅದರಲ್ಲಿ ಮೆಸೇಜ್ ಸಹಿತ ಇದೆ ಎನ್ನುವ ಮಾತನ್ನು ಆಡಿದ್ದಾಳೆ ಈ ಮಾದಕ ನಟಿ. ಈ ಮೂಲಕ  ತುಂಬಾ ಭಿನ್ನವಾಗಿ ಈ ಚಿತ್ರವನ್ನು ಪ್ರಮೋಟ್ ಮಾಡುತ್ತಿದ್ದಾಳೆ ಸನ್ನಿ. 
ರೊಮ್ಯಾಂಟಿಕ್ ಚಿತ್ರದಲ್ಲಿ ಬರುವ ಶೃಂಗಾರ ಸನ್ನಿವೇಶಗಳಲ್ಲಿ ಒಂದು ಒಳ್ಳೆಯ ಮೆಸೇಜ್  ಒಂದು ಡಿಫರೆಂಟ್  ಸೆಕ್ಸ್ ಕಾಮಿಡಿಯಾಗಿ ಸಿದ್ಧವಾಗಿರುವ ಈ ಕುಚ್ ಕುಚ್ ಲೋಚಾ ಹೈ  ಬಗ್ಗೆ ಅದ್ಯಾಕೆ ನಕಾರಾತ್ಮಕವಾದ ವದಂತಿಗಳು ಹರಡಿವೆ ಎನ್ನುವ ಕೋಪ ಆಕೆಯದ್ದಾಗಿದೆ. 
 
ತಾನು ನಟಿಸಿರುವ ಈ ಚಿತ್ರ ಸೆಕ್ಸ್ ಕಾಮಿಡಿಯಾಗಿ ಇದ್ದು, ಕಾಮಿಡಿ ಚಿತ್ರಗಳನ್ನು ನೋಡುವ ಜನ ಅದ್ಯಾಕೆ ಸೆಕ್ಸ್ ಕಾಮಿಡಿ ಚಿತ್ರವನ್ನು ನೋಡಲು ಹಿಂದೇಟು ಹಾಕುತ್ತಾರೆ ಎನ್ನುವ ಮಾತನ್ನು ಹೇಳಿದ್ದಾಳೆ. ಬಾಲಿವುಡ್ ನಲ್ಲಿ ಸನ್ನಿ ಮಾತುಗಳು  ರಬರಬ ಎಂದು ಸುರಿಯುತ್ತಿರುವುದನ್ನು  ಕಂಡು ಶಾಕ್ ಆಗಿದ್ದಾರೆ ಬಾಲಿವುಡ್ ಮಂದಿ.  ಸನ್ನಿ ಲಿಯೋನ್  ಮಾತುಗಳನ್ನು ಕೇಳುತ್ತಿದ್ದರೆ, ಸೆಕ್ಸ್  ಕಾಮಿಡಿ ಹೆಸರಲ್ಲಿ ಇನ್ನು ಮುಂದೆ ಲೈಂಗಿಕ ಶಿಕ್ಷಣ ಹೇಳಿಕೊಡುವ ಚಿತ್ರಗಳು ಹೇರಳವಾಗಿ ಬಾಲಿವುಡ್ ನಲ್ಲಿ ಬರುತ್ತದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ ಚಿತ್ರಮಂದಿ. 

ವೆಬ್ದುನಿಯಾವನ್ನು ಓದಿ