ಸಲಾರ್ ಸಿನಿಮಾ ಉಗ್ರಂ ರಿಮೇಕಾ? ನೆಟ್ಟಿಗರು ಏನಂದ್ರು?

ಶನಿವಾರ, 2 ಡಿಸೆಂಬರ್ 2023 (09:20 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಟ್ರೈಲರ್ ನಿನ್ನೆ ಸಂಜೆ ಬಿಡುಗಡೆಯಾಗಿದೆ.

ಟ್ರೈಲರ್ ನೋಡಿದ ಪ್ರೇಕ್ಷಕರು ಪ್ರಭಾಸ್ ಆಕ್ಷನ್ ಸಿಕ್ವೆನ್ಸ್ ಗಳನ್ನು ನೋಡಿ ರೋಮಾಂಚನಗೊಂಡಿದ್ದಾರೆ. ಇದು ಪಕ್ಕಾ ಪ್ರಶಾಂತ್ ನೀಲ್ ಶೈಲಿಯ ಸಿನಿಮಾ ಎಂದು ನೋಡಿದರೇನೇ ಗೊತ್ತಾಗುತ್ತದೆ.

ಆದರೆ ಟ್ರೈಲರ್ ನೋಡಿದ ಪ್ರೇಕ್ಷಕರು ಇದು ಪ್ರಶಾಂತ್ ನೀಲ್ ಈ ಹಿಂದೆ ಮಾಡಿದ್ದ ಉಗ್ರಂ ಸಿನಿಮಾ ರಿಮೇಕ್ ಎನ್ನುತ್ತಿದ್ದಾರೆ. ಶ್ರೀಮುರಳಿ ನಾಯಕರಾಗಿ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದ ಉಗ್ರಂ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಈ ಸಿನಿಮಾದಲ್ಲೂ ನಾಯಕ ಸ್ನೇಹಿತನಿಗಾಗಿ ಹೋರಾಡುವ ಕತೆಯಿದೆ.

ಇದೀಗ ಬಿಡುಗಡೆಯಾಗಿರುವ ಸಲಾರ್ ನಲ್ಲೂ ಸ್ನೇಹಿತರಿಬ್ಬರ ಕತೆಯಿದೆ. ಹೀಗಾಗಿ ಪ್ರೇಕ್ಷಕರು ಸಲಾರ್ ಸಿನಿಮಾ ಉಗ್ರಂ ಸಿನಿಮಾದ ಸುಧಾರಿತ ವರ್ಷನ್ ಎನ್ನುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ