ಪವನ್ ಕಲ್ಯಾಣ್ ಚಿತ್ರದಲ್ಲಿ ನಟಿಸುವ ಅವಕಾಶ ಈ ನಟಿಗೆ ಸಿಗುತ್ತಾ?

ಶುಕ್ರವಾರ, 27 ನವೆಂಬರ್ 2020 (06:52 IST)
ಹೈದರಾಬಾದ್ : ಪವನ್ ಕಲ್ಯಾಣ್ ಮತ್ತು ಕ್ರಿಶ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಬಳಿಕ ಸಾಯಿ ಪಲ್ಲವಿ ಮತ್ತೊಬ್ಬ ನಾಯಕಿ ಪಾತ್ರ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಈ ಚಿತ್ರದಲ್ಲಿ ಇನ್ನೊಬ್ಬ ನಾಯಕಿಯ ಹೆಸರು ಕೇಳಿಬರುತ್ತಿದೆ.

ಕ್ರಿಶ್ ಪ್ರಮುಖ ಪಾತ್ರಕ್ಕಾಗಿ ಇಸ್ಮಾರ್ಟ್ ಬ್ಯೂಟಿ ನಿಧಿ ಅಗರ್ವಾಲ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರವಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಇಸ್ಮಾರ್ಟ್ ಬ್ಯೂಟಿ ಚಿತ್ರದಲ್ಲಿ ಯಶಸ್ಸು ಕಂಡ ನಟಿ  ನಿಧಿ ಅಗರ್ವಾಲ್ ಪ್ರಸ್ತುತ ಎರಡು, ಮೂರು ತೆಲುಗು ಚಿತ್ರದಲ್ಲಿ ಮತ್ತು ಇತರ ಭಾಷೆಗಳಲ್ಲಿ ನಟಿಸಿದ್ದಾರೆ.

ಅನೇಕ ನಟಿಯರು ಸ್ಟಾರ್ ನಟ ಪವನ್ ಕಲ್ಯಾಣ್ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಾದರೂ ನಟಿಸುವ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಅಂತಹದರಲ್ಲಿ  ನಿಧಿ ಅಗರ್ವಾಲ್ ಗೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕರೆ ಅವರ ವೃತ್ತಿ ಜೀವನ ಖಂಡಿತವಾಗಿಯೂ ಬದಲಾಗುವುದರಲ್ಲಿ ಸಂಶಯವಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ