ಇಶಾ ಡಿಯೋಲ್ ಅವರಿಗೆ ತುಂಬಾ ಸಹನಯಿದೆ- ಕಿಶನ್

ಮಂಗಳವಾರ, 1 ಡಿಸೆಂಬರ್ 2015 (14:07 IST)
ಸ್ಯಾಂಡಲ್ ವುಡ್ ನಲ್ಲಿ ಬಾಲನಟನಾಗಿ ಮಿಂಚಿದವರು ಕಿಶನ್. ತನ್ನ ಮುದ್ದಾದ ನಟನೆ, ಮಾತುಗಳಿಂದ ಅಭಿಮಾನಿಗಳ ದಿಲ್ ಕದ್ದಿದ್ದ ಕಿಶನ್ ತನ್ನ 9ನೇ ವಯಸ್ಸಿನಲ್ಲಿ ಕೇರ್ ಫುಟ್ ಪಾತ್ ಸಿನಿಮಾವನ್ನು ನಿರ್ದೇಶಿಸಿ ದೇಶದ ಅತೀ ಕಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರವಾದ್ರು. ಆದ್ರೀಗ ಕಿಶನ್ ಕೇರ್ ಫುತ್ ಪಾತ್ ಪಾರ್ಟ್-2 ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. 
 
ಸಿನಿಮಾದಲ್ಲಿ ಹೇಮಾಮಾಲಿನಿ ಪುತ್ರಿ ಇಶಾ ಡಿಯೋಲ್ ಅಭಿನಯಿಸಿದ್ದಾರೆ.ಇನ್ನು ಇಶಾ ಜೊತೆ ಕೆಲಸ ಮಾಡಿದ್ದು ಮರೆಯಲಾಗದ ಅನುಭವ ಅಂತಾ ಕಿಶನ್ ಹೇಳಿದ್ದಾರೆ.
 ಸಿನಿಮಾಕ್ಕಾಗಿ ನಾವು ಮೊದಲು ಹೇಮಾಮಾಲಿನಿ ಅವರನ್ನು ಭೇಟಿಯಾಗಿದ್ದೆವು.ಆಗ ಅವರು ನಮಗೆ ಇಶಾ ಅವರನ್ನು ಸೂಚಿಸಿದ್ರು.ಅವರ ಜೊತೆ ಮಾತುಕತೆ ನಡೆಸಿದಾಗ ಅವರು ಒಪ್ಪಿಕೊಂಡರು. ಇನ್ನು ಅವರ ಜೊತೆ ಕೆಲಸ ಮಾಡಿದ್ದು ಒಂದು ಮರೆಯಲಾಗದ ಅನುಭವ ಅಂದಿದ್ದಾರೆ. ಅವರು ಶೂಟಿಂಗ್ ಮುಗಿಸಿ ಮುಂಬೈಗೆ ಹೋದ ಮೇಲೂ ನಮ್ಮ ಮನೆಯಲ್ಲಿ ತಿಂದ ಪೊಂಗಲ್ ನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂತಾ ಆಗಾಗ್ಗೆ ಹೇಳುತ್ತಿರುತ್ತಾರೆ ಅಂತಾ ಕಿಶನ್ ಹೇಳಿದ್ದಾರೆ.
 
 ಇನ್ನು ಇಶಾ ಡಿಯೋಲ್ ಕೂಡ ಸಿನಿಮಾದಲ್ಲಿ ಕೆಲಸ ಮಾಡಿದ್ದಕ್ಕೆ ನನಗೆ ಖುಷಿಯಾಗುತ್ತಿದೆ ಅಂತಾ ತಿಳಿಸಿದ್ದಾರೆ. ಸಿನಿಮಾದ ಸ್ಕ್ರಿಫ್ಟ್ ನೋಡಿಯೋ ನಾನು ಸಿನಿಮಾವನ್ನು ಒಪ್ಪಿಕೊಂಡೆ. ಸಿನಿಮಾದಲ್ಲಿ ನಾನು ವಕೀಲೆಯಾಗಿ ಕಾಣಿಸಿಕೊಂಡಿದ್ದೇನೆ. ವಕೀಲೆಯಾಗಿ ಅಭಿನಯಿಸಿದ್ದು ನನಗೆ ಮರೆಯಲಾಗದ ಅನುಭವ ಅಂತಾ ಇಶಾ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ