ಟಾಲಿವುಡ್ ನಲ್ಲಿ ಅಭಿನಯಿಸುತ್ತಿದ್ದಾರೆ ನಟಿ ಐಶಾನಿ ಶೆಟ್ಟಿ

ಗುರುವಾರ, 21 ಜನವರಿ 2016 (13:38 IST)
ವಾಸ್ತು ಪ್ರಕಾರ ಸಿನಿಮಾದಲ್ಲಿನ ಐಶಾನಿ ಶೆಟ್ಟಿ ಅವರ ಅಭಿನಯ ಕಂಡ ಅದೆಷ್ಟೋ ನಿರಮಪಕರುಗಳು ಈ ಮುದ್ದಾದ ಹುಡುಗಿ ತಮ್ಮ ಸಿನಿಮಾ ನಾಯಕಿಯಾದ್ರೆ ಚೆನ್ನಾಗಿರುತ್ತೆ ಅಲ್ವಾ ಅಂತಾ ಮನಸ್ಸಲ್ಲೇ ಲೆಕ್ಕಾಚಾರ ಹಾಕಿದ್ರು.ಆದ್ರೆ ರಾಕೆಟ್ ಸಿನಿಮಾ ಬಿಟ್ರೆ ಐಶಾನಿ ಬೇರ್ಯಾವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ.ಆದ್ರೀಗ ಐಶಾನಿಯವರಿಗೆ ಪರ ಭಾಷಾ ಸಿನಿಮಾದಿಂದ ಆಫರ್ ಬಂದಿದೆಯಂತೆ.
 
  ಟಾಲಿವುಡ್  ಹೀರೋ ರಾಹುಲ್  ರವೀಂದ್ರನ್ ಅವರ ಜೊತೆ ಐಶಾನಿ ಶೆಟ್ಟಿ ತೆರೆ ಹಂಚಿಕೊಳ್ಳುತ್ತಿದ್ದಾರಂತೆ. ಅಂದ್ಹಾಗೆ ಸಿನಿಮಾದಲ್ಲಿ ರಾಹುಲ್ ಅವರಿಗೆ ಮೂವರು ನಾಯಕಿಯರು ಇರಲಿದ್ದಾರಂತೆ. ಅದರಲ್ಲಿ ಓರ್ವ ನಾಯಕಿ ಐಶಾನಿ ಅಂತೆ.ಸಿನಿಮಾದಲ್ಲಿ ನನ್ನದು ಅತ್ಯಂತ ವಿಭಿನ್ನವಾದ ಪಾತ್ರ ಅಂತಾ ಅವರು ಹೇಳಿದ್ದಾರೆ.ಸಿನಿಮಾದಲ್ಲಿ ಸಣ್ಣ ಹಳ್ಳಿಪಟ್ಟಣವೊಂದರಿಂದ ನಗರಕ್ಕೆ ಬಂದ ಹುಡುಗಿಯ ಪಾತ್ರವನ್ನು ಐಶಾನಿ ನಿರವಹಿಸಲಿದ್ದಾರಂತೆ.ಸಿನಿಮಾಗಾಗಿ ಐಶಾನಿ ಸಾಕಷ್ಟು ವರ್ಕೌಟ್ ಮಾಡುತ್ತಿದ್ದಾರಂತೆ. ಅಲ್ಲದೇ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಕೂಡ ಇದೆಯಂತೆ.
 
  ಅಂದ್ಹಾಗೆ ಕನ್ನಡದ ನಟಿಯರು ಪರಭಾಷಾ ಸಿನಿಮಾಗಳಲ್ಲಿ ಮಿಂಚುತ್ತಿರೋದು ಇದೇ ಮೊದಲಲ್ಲ. ಈ ಹಿಂದೆಯೇ ರಮ್ಯಾ, ಹರಿಪ್ರಿಯಾ, ಪ್ರಿಯಾಮಣಿ, ಪ್ರಣೀತಾ, ನಿಧಿ ಸುಬ್ಬಯ್ಯ ಹೀಗೆ ಅನೇಕ ನಟಿಯರು ಪರ ಭಾಷೆಯಲ್ಲೂ ಅಭಿನಯಿ ಸೈ ಎನಿಸಿಕೊಂಡಿದ್ದಾರೆ. ಆದ್ರೆ ಈ ಸಿನಿಮಾ ಐಶಾನಿ ಅವರ ವೃತ್ತಿ ಬದುಕಿಗೆ ಯಾವ ರೀತಿ ತಿರುವು ನೀಡುತ್ತೆ ಅನ್ನೋದು ಸದ್ಯದ ಕುತೂಹಲ.

ವೆಬ್ದುನಿಯಾವನ್ನು ಓದಿ