ಟಾಯ್ಲೆಟ್ ಲ್ಲಿ ಕೂರಲು ಕಷ್ಟ: ಡಿಐಜಿಗೆ ನಟ ದರ್ಶನ್ ಇಟ್ಟ ಬೇಡಿಕೆಯೇನು

Sampriya

ಶನಿವಾರ, 31 ಆಗಸ್ಟ್ 2024 (16:14 IST)
ಬೆಂಗಳೂರು: ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ದರ್ಶನ್‌ ಅಬವರು ಕಮೋಡ್ ಟಾಯ್ಲೆಟ್‌ಗೆ ಬೇಡಿಕೆಯಿಟ್ಟಿದ್ದಾರೆ.

ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿಯಾದ ಡಿಐಜಿ ಶೇಷಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಬೆನ್ನು ನೋವಿನಿಂದಾಗಿ ಇಂಡಿಯನ್ ಟಾಯ್ಲೆಟ್‌ನಲ್ಲಿ ಕೂರಲು ಕಷ್ಟವಾಗುತ್ತಿದೆ ಎಂದು ದರ್ಶನ್ ಹೇಳಿದ್ದಾರೆ. ಆದರೆ ರೂಲ್ಸ್ ಪ್ರಕಾರ, ವೈದ್ಯಕೀಯ ತಪಾಸಣೆ ನಂತರ ಅದರ ಬಗ್ಗೆ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.

ದರ್ಶನ್ ಅವರಿಗೆ ನೀಡಿದ ಫೆಸಿಲಿಟಿ ಬಗ್ಗೆ ಮಾತನಾಡಿದ ಅವರು, 15ಜನ ಇರುವ ಸೆಲ್‌ನಲ್ಲಿ ನಾಲ್ಕು ಜನರನ್ನಷ್ಟೇ ಇರಿಸಲಾಗಿದೆ. ದರ್ಶನ್ ಅವರನ್ನು ಸಿಂಗಲ್ ಸೆಲ್‌ನಲ್ಲಿ ಇರಿಸಲಾಗಿದೆ.  

ಇನ್ನೂ ದರ್ಶನ್ ಓಡಾಡುವ ಕಾರಿಡರ್ ಸೇರಿದಂತೆ ಎಲ್ಲ ಕಡೆಯೂ ಸಿಸಿಟಿವಿ ಕವರೇಜ್ ಇದೆ. ಮೂರು ಸಿಸಿಟಿವಿಗಳನ್ನು ಅಳವಡಿಸಿದ್ದು, ಪ್ರತಿನಿತ್ಯದ ಪೂಟೇಜ್‌ ಅನ್ನು ಸೇವ್ ಮಾಡಲು ಹೇಳಿದ್ದೇವೆ. ದರ್ಶನ್ ಇರುವ ಸೆಲ್‌ನಲ್ಲಿ ಹೊರಗಡೆ ಇರುವ ಸಿಬ್ಬಂದಿಗೆ ಕ್ಯಾಮೆರಾ ಅಳವಡಿಸಲಾಗಿದೆ. ಅದರಲ್ಲಿ ಎಲ್ಲ ರೀತಿಯ ಮಾಹಿತಿ ದಾಖಲಾಗುತ್ತದೆ.

ದರ್ಶನ್ ರೂಂನಲ್ಲಿ ತಟ್ಟೆ, ಚೊಂಬು, ಲೋಳ ಹಾಗೂ ಹೊದಿಕೆ ಇದೆ ಅಷ್ಟೇ. ಬೆನ್ನು ನೋವಿನಿಂದಾಗಿ ಇಂಡಿಯನ್ ಟಾಯ್ಲೆಟ್‌ನಲ್ಲಿ ಕೂರಲು ಕಷ್ಟವಾಗುತ್ತಿದೆ ಎಂದಿದ್ದಾರೆ ಕೋರಿದ್ದಾರೆ. ಅವರ ಆರೋಗ್ಯ ತಪಾಸಣೆ ವರದಿ ಬಂದ ನಂತರ ನಾವು ಈ ಸಂಬಂಧ ಕ್ರಮ ಕೈಗೊಳ್ಳುತ್ತೇವೆ ಮಾಹಿತಿ ಹಂಚಿಕೊಂಡರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ