ಶಿವಣ್ಣ ನಿವಾಸದಿಂದ ವಾಪಸಾದ ಇಬ್ಬರು ಐಟಿ ಅಧಿಕಾರಿಗಳು: ಉಳಿದವರಿಂದ ಕಂಪ್ಯೂಟರ್ ಸೀಝ್ ಮಾಡಿ ತನಿಖೆ
ಶುಕ್ರವಾರ, 4 ಜನವರಿ 2019 (11:16 IST)
ಬೆಂಗಳೂರು: ನಿನ್ನೆಯಿಂದ ಐಟಿ ಅಧಿಕಾರಿಗಳ ದಾಳಿಯಿಂದ ತಬ್ಬಿಬ್ಬಾಗಿರುವ ಸ್ಯಾಂಡಲ್ ವುಡ್ ತಾರೆಯರಿಗೆ ಇಂದೂ ಅಧಿಕಾರಿಗಳ ಡ್ರಿಲ್ ಮುಂದುವರಿದಿದೆ.
ಶಿವರಾಜ್ ಕುಮಾರ್ ನಿವಾಸದಲ್ಲಿ ನಿನ್ನೆ ರಾತ್ರಿಯೂ ತಂಗಿ ತನಿಖೆ ನಡೆಸುತ್ತಿದ್ದ ಅಧಿಕಾರಿಗಳ ಪೈಕಿ ಇದೀಗ ಇಬ್ಬರು ಅಧಿಕಾರಿಗಳು ವಾಪಸಾಗಿದ್ದು, ಉಳಿದ 8 ಅಧಿಕಾರಿಗಳ ತಂಡ ತನಿಖೆ ಮುಂದುವರಿಸಿದೆ. ಇಲ್ಲಿನ ಕಂಪ್ಯೂಟರ್, ಹಾರ್ಡ್ ಡಿಸ್ಕ್ ಗಳನ್ನೂ ಕೂಡಾ ವಶಪಡಿಸಿಕೊಂಡು ಇಂಚು ಇಂಚಾಗಿ ತಪಾಸಣೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಕಿಚ್ಚ ಸುದೀಪ್, ಪುನೀತ್, ಯಶ್ ಮನೆಯಲ್ಲೂ ಅಧಿಕಾರಿಗಳ ಡ್ರಿಲ್ ಮುಂದುವರಿದಿದೆ. ಕಿಚ್ಚ ಸುದೀಪ್, ಪುನೀತ್ ಪತ್ನಿಯರ ವಿಚಾರಣೆ ನಡೆಸಲಿರುವ ಅಧಿಕಾರಿಗಳು ಇವರ ಹೆಸರಿನಲ್ಲಿರುವ ಆಸ್ತಿ ದಾಖಲೆಗಳು, ಅದರಿಂದ ಬರುತ್ತಿರುವ ಆದಾಯಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ