ಸೂಪರ್‌ಸ್ಟಾರ್ ನಟರೊಂದಿಗೆ ನಟಿಸುವ ಕನಸಿದೆ: ಸನ್ನಿ ಲಿಯೋನ್

ಶನಿವಾರ, 4 ಜುಲೈ 2015 (18:32 IST)
ಬಾಲಿವುಡ್‌ನಲ್ಲಿ ಹಾಟ್ ಹಾಟ್ ಅಲವೆ ಎಬ್ಬಿಸಿ ಜಿಸ್ಮ್-2 ಮತ್ತು ರಾಗಿಣಿ ಎಂಎಂಎಸ್-2 ಚಿತ್ರದಲ್ಲಿ ನಡೆಸಿ ಪಡ್ಡೆಹುಡುಗರ ಮೈ ಚಳಿ ಬಿಡಿಸಿದ್ದ ಹಾಟ್ ತಾರೆ ಸನ್ನಿ ಲಿಯೋನ್, ಸೂಪರ್ ಸ್ಟಾರ್ ನಟರೊಂದಿಗೆ ನಟಿಸುವ ಕನಸಿದೆ ಎಂದು ಮನದಾಳವನ್ನು ಬಹಿರಂಗಪಡಿಸಿದ್ದಾರೆ.  
 
ಬಾಲಿವುಡ್ ಪ್ರವೇಶಿಸುವ ಪ್ರತಿಯೊಬ್ಬ ಕಲಾವಿದರಿಗೆ ದೊಡ್ಡ ದೊಡ್ಡ ಸ್ಟಾರ್ ನಟಡರೊಂದಿಗೆ ಅಭಿನಯಿಸಬೇಕು ಎನ್ನುವ ಕನಸಿರುತ್ತದೆ. ಅದರಂತೆ,ನನಗೂ ಕೂಡಾ ಸೂಪರ್‌ಸ್ಟಾರ್ ನಟರೊಂದಿಗೆ ನಟಿಸುವ ಕನಸಿದೆ ಎಂದು ತಿಳಿಸಿದ್ದಾರೆ. 
 
ಬಾಲಿವುಡ್ ಚಿತ್ರದಲ್ಲಿ ನನಗೆ ದೊರೆಯುವ ಪಾತ್ರಗಳಿಗೆ ನ್ಯಾಯ ಒದಗಿಸಲು ಕಠಿಣ ಶ್ರಮ ಪಡುತ್ತೇನೆ. ನಾನು ನನ್ನ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಬಯಸುತ್ತೇನೆ ಎಂದಿದ್ದಾರೆ.
 
ಸನ್ನಿ ಲಿಯೋನ್ ನಟ ರಣವೀರ್ ಸಿಂಗ್ ಜೊತೆಯಲ್ಲಿ ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ ಎಂಟನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ  
 
ಸಹ ನಟ ರಣವಿಜಯ್ ಸಿಂಗ್ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸನ್ನಿ, ರಣವಿಜಯ್ ತುಂಬಾ ತಮಾಷೆಯ ವ್ಯಕ್ತಿ. ವೃತ್ತಿಯಲ್ಲಿ ಪರಿಪಕ್ವತೆಯನ್ನು ಹೊಂದಿದ್ದು ವೃತ್ತಿಪರರಾಗಿದ್ದಾರೆ. ಅವರು ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಾರೆ. ಅದರಂತೆ ನಾನು ಕೂಡಾ ನನ್ನ ಪತಿಯನ್ನು ಅತಿಯಾಗಿ ಪ್ರೀತಿಸುತ್ತೇನೆ ಇದು ಇಬ್ಬರಲ್ಲಿರುವ ಸಾಮಾನ್ಯ ಅಂಶ ಎಂದು ನುಲಿದಿದ್ದಾರೆ.   
 
ಪ್ರಸಕ್ತ ವರ್ಷದಲ್ಲಿ ಮಹಿಳೆ ಮತ್ತು ಅವರ ಪ್ರೀತಿಯ ಬಗ್ಗೆ ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ ಎಂಟನೇ ಆವೃತ್ತಿಯ ಮೂಲ ಉದ್ದೇಶವಾಗಿದೆ. ಆದ್ದರಿಂದ ನಾನು ಮತ್ತು ರಣವಿಜಯ್ ಸ್ಪರ್ಧಾಳುಗಳಿಗೆ ಉತ್ತಮ ಮತ್ತು ಆರೋಗ್ಯಕರವಾದಂತಹ ಮಾರ್ಗದರ್ಶನ ನೀಡಲು ಆದೇಶಿಸಲಾಗಿದೆ ಎಂದು ಹಾಟ್ ತಾರೆ ಸನ್ನಿ ಲಿಯೋನ್ ಹೇಳಿದ್ದಾರೆ.    
 

ವೆಬ್ದುನಿಯಾವನ್ನು ಓದಿ