ರಕ್ಕಮ್ಮ ಹಾಡಿನ ಸಕ್ಸಸ್ ಗೆ ಕನ್ನಡದಲ್ಲೇ ಧನ್ಯವಾದ ಸಲ್ಲಿಸಿದ ಜಾಕ್ವೆಲಿನ್
ಈ ಹಾಡು ಈಗಾಗಲೇ ಎಲ್ಲಾ ಭಾಷೆಗಳಲ್ಲಿ ಸೂಪರ್ ಹಿಟ್ ಆಗಿದ್ದು, ಭರ್ಜರಿ ವ್ಯೂ ಪಡೆದುಕೊಂಡಿದೆ. ಇದೀಗ ಹಾಡಿನ ಯಶಸ್ಸಿಗೆ ನಾಯಕಿ ಜಾಕ್ವೆಲಿನ್ ಫರ್ನಾಂಡಿಸ್ ಕನ್ನಡದಲ್ಲೇ ಧನ್ಯವಾದ ಸಲ್ಲಿಸಿದ್ದಾರೆ.
ನಮಸ್ಕಾರ ಎಲ್ಲರಿಗೂ. ರಾ ರಾ ರಕ್ಕಮ್ಮ ದೊಡ್ಡ ಹಿಟ್ ಆಗಿದೆ. ಊರಲ್ಲಿ ಎಲ್ಲಾ ಇನ್ಮೇಲೆ ಒಂದೇ ಹೆಸರು, ವಿಕ್ರಾಂತ್ ರೋಣ. ನಮ್ಮ ಹಾಡಿಗೆ ಇಷ್ಟು ಪ್ರೀತಿ, ಯಶಸ್ಸು ತಂದುಕೊಟ್ಟಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದು ಜಾಕ್ವೆಲಿನ್ ಕನ್ನಡದಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.