ಕನ್ನಡದಲ್ಲಿ ಧ್ವನಿ ನೀಡಿದ್ದೇನೆ ಎಂಬುದೇ ನನಗೆ ಹೆಮ್ಮೆ: ಜಗಪತಿಬಾಬು

ಭಾನುವಾರ, 25 ಅಕ್ಟೋಬರ್ 2020 (11:00 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ರಾಬರ್ಟ್’ ಸಿನಿಮಾದಲ್ಲಿ ಖಡಕ್ ವಿಲನ್ ಪಾತ್ರ ಮಾಡಿರುವ ತೆಲುಗು ಸ್ಟಾರ್ ನಟ ಜಗಪತಿಬಾಬು ಕನ್ನಡದಲ್ಲೇ ಡಬ್ಬಿಂಗ್ ಮಾಡಿರುವುದು ಸುದ್ದಿಯಾಗಿದೆ.

 

ನಿರ್ದೇಶಕ ತರುಣ್ ಸುಧೀರ್ ಈ ವಿಚಾರವನ್ನು ರಿವೀಲ್ ಮಾಡಿದ್ದರು. ಅವರು ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಅದೂ ರಾಬರ್ಟ್ ಸಿನಿಮಾಗಾಗಿ ಡಬ್ಬಿಂಗ್ ಮಾಡಿರುವುದು ನಮಗೆ ಹೆಮ್ಮೆ ಎಂದಿದ್ದರು. ಈ ಬಗ್ಗೆ ಈಗ ಸ್ವತಃ ಜಗಪತಿಬಾಬು ಮಾತನಾಡಿದ್ದು ‘ರಾಬರ್ಟ್ ಸಿನಿಮಾಗಾಗಿ ಮೊದಲ ಬಾರಿಗೆ ಕನ್ನಡದಲ್ಲೇ ಡಬ್ಬಿಂಗ್ ಮಾಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.  ನಿರ್ದೇಶಕ ತರುಣ್ ಸುಧೀರ್ ಮತ್ತು ದರ್ಶನ್ ಒಳ್ಳೆಯ ವ್ಯಕ್ತಿಗಳು. ಎಲ್ಲರಿಗೂ ದಸರಾ ಹಬ್ಬದ ಶುಭಾಷಯಗಳು’ ಎಂದು ಅವರು ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ