ನೈಟ್ ಸಫಾರಿ ಮಾಡಿ ಸಿಕ್ಕಿಬಿದ್ದ ನಟ ಧನ್ವೀರ್ ಗೌಡ ವಿಚಾರಣೆಗೆ ಹಾಜರು

ಭಾನುವಾರ, 25 ಅಕ್ಟೋಬರ್ 2020 (10:22 IST)
ಬೆಂಗಳೂರು: ಬಂಡೀಪುರ ಅರಣ್ಯ ವಲಯದಲ್ಲಿ ಸ್ನೇಹಿತರೊಂದಿಗೆ ನೈಟ್ ಸಫಾರಿ ಮಾಡಿ ಸಿಕ್ಕಿಬಿದ್ದ ಸ್ಯಾಂಡಲ್ ವುಡ್ ನಟ ಧನ್ವೀರ್ ಗೌಡ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.


ಧನ್ವೀರ್ ಗೌಡ ಮತ್ತು ಸ್ನೇಹಿತರು ನೈಟ್‍ ಸಫಾರಿ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಲ್ಲಿ ನೈಟ್ ಸಫಾರಿ ನಿಷೇಧಿಸಲಾಗಿದ್ದರೂ ನಟ ಸಫಾರಿ ಮಾಡಿದ್ದು ಹೇಗೆ ಎಂಬುದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಬಂಡೀಪುರ ಹುಲಿ ರಕ್ಷಿತಾರಣ್ಯದ ನಿರ್ದೇಶಕ ಟಿ ಬಾಲಚಂದ್ರ ತನಿಖೆಗೆ ಆದೇಶಿಸಿದ್ದರು. ಅದರಂತೆ ಧನ್ವೀರ್ ವಿಚಾರಣೆಗೆ ಹಾಜರಾಗಿದ್ದು, ಅಧಿಕಾರಿಗಳು ಹೇಳಿಕೆ ಪಡೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ