ಜಗ್ಗೇಶ್ ನೀರ್ ದೋಸೆ ಅರ್ಧಶತಕ

ಶುಕ್ರವಾರ, 21 ಅಕ್ಟೋಬರ್ 2016 (12:08 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಮತ್ತು ಹರಿಪ್ರಿಯಾ ಅಭಿನಯದ ನೀರ್ ದೋಸೆ ಚಿತ್ರ 50 ದಿನಗಳನ್ನು ಪೂರೈಸಿ ಮುನ್ನಗ್ಗುತ್ತಿದೆ.

ಹಲವು ದಿನಗಳ ನಂತರ ಜಗ್ಗೇಶ್ ಚಿತ್ರವೊಂದು ಇಷ್ಟು ದಿನ ಯಶಸ್ವಿ ಪ್ರದರ್ಶನ ಕಂಡಿದೆ.  ಇದರಲ್ಲಿ ವೇಶ್ಯೆ ಪಾತ್ರ ಮಾಡಿದ್ದ ಹರಿಪ್ರಿಯಾ ಬೋಲ್ಡ್ ನೆಸ್ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿತ್ತು.

ಅದೆಲ್ಲಾ ಇರಲಿ, ಇದೀಗ ಜಗ್ಗೇಶ್ ಹೊಸದೊಂದು ಚಿತ್ರ ಒಪ್ಪಿಕೊಂಡಿದ್ದಾರಂತೆ. ಹಾಗಂತ ತಮ್ಮ ಟ್ವಿಟರ್  ಪೇಜ್ ನಲ್ಲಿ ಹೇಳಿದ್ದಾರೆ.  ಗೆಳೆಯರೊಬ್ಬರ ನಿರ್ಮಾಣದಲ್ಲಿ ಕಾಮಿಡಿ ಮರ್ಡರ್ ಮಿಸ್ಟ್ರಿ ಕತೆ ಒಪ್ಪಿಕೊಂಡಿದ್ದೇನೆ.  ಹೆಚ್ಚಿನ ವಿವರಗಳನ್ನು ಸದ್ಯದಲ್ಲೇ ಹೇಳುವುದಾಗಿ ಬರೆದುಕೊಂಡಿದ್ದಾರೆ.  ಸದ್ಯ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಿರೂಪಕರಾಗಿರುವ ಕಾಮಿಡಿ ಕಿಂಗ್ ಜಗ್ಗೇಶ್ ಸಿನಿಮಾವನ್ನು ಸದ್ಯದಲ್ಲೇ ನಿರೀಕ್ಷಿಸಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ