ತೋತಾಪುರಿ ಸಿನಿಮಾ ಬಗ್ಗೆ ಲೇಟೆಸ್ಟ್ ಅಪ್ ಡೇಟ್ ಕೊಟ್ಟ ಜಗ್ಗೇಶ್

ಬುಧವಾರ, 31 ಮಾರ್ಚ್ 2021 (09:47 IST)
ಬೆಂಗಳೂರು: ನವರಸನಾಯಕ ಜಗ್ಗೇಶ್-ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ತೋತಾಪುರಿ ಸಿನಿಮಾ ಬಗ್ಗೆ ಜಗ್ಗೇಶ್ ಲೇಟೆಸ್ಟ್ ಅಪ್ ಡೇಟ್ ಕೊಟ್ಟಿದ್ದಾರೆ.


ತೋತಾಪುರಿ ಸಿನಿಮಾ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಇನ್ನೇನಿದ್ದರೂ ತಾಂತ್ರಿಕ ಕೆಲಸಗಳಷ್ಟೇ ಬಾಕಿಯಿದೆ ಎಂದು ಜಗ್ಗೇಶ್ ಹೇಳಿದ್ದಾರೆ.

ನೀರ್ ದೋಸೆ ಬಳಿಕ ಜಗ್ಗೇಶ್ ನಿರ್ದೇಶಕ ವಿಜಯ ಪ್ರಸಾದ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾವಿದು. ಈ ಸಿನಿಮಾ ಕಳೆದ ತಿಂಗಳೇ ಮಾತಿನ ಭಾಗದ ಚಿತ್ರೀಕರಣ ಮುಗಿಸಿತ್ತು. ಈಗ ಹಾಡಿನ ಚಿತ್ರೀಕರಣವೂ ಪೂರ್ತಿಗೊಳಿಸಿದೆ. ಇನ್ನು ಸದ್ಯದಲ್ಲೇ ಡಬ್ಬಿಂಗ್ ಮುಗಿಸಲಿದ್ದು, ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ಜಗ್ಗೇಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ