ಪುನೀತ್ ರಾಜ್ ಕುಮಾರ್ ಹೊಸ ಚಿತ್ರದ ಹೆಸರೇನು ಗೊತ್ತೆ?

ಮಂಗಳವಾರ, 22 ಏಪ್ರಿಲ್ 2014 (09:36 IST)
ಪುನೀತ್‌ ರಾಜ್‌ಕುಮಾರ್‌ ಅಭಿನಯಿಸುತ್ತಿರುವ 'ದೂಕುಡು' ರೀಮೇಕ್‌ ಚಿತ್ರದ ಹೆಸರೇನು? ಎಂದು ಕೇಳಿದರೆ ಯಾರಿಗೂ ಸರಿಯಾದ ಉತ್ತರ ಗೊತ್ತಿಲ್ಲ.
 
 ಅಧಿಪತಿ, ರಾಜ್ ಕುಮಾರ್ ಹೀಗೆ ದಿನಕ್ಕೊಂದು ಹೆಸರು ಕೇಳಿ ಬರ್ತಾ ಇದೆ ಪುನೀತ್ ರಾಜ್ ಕುಮಾರ್ ನಟನೆಯ ದೂಕುಡು ರೀಮೇಕ್ ಚಿತ್ರದ ಬಗ್ಗೆ. ಕಾರಣ ಇಷ್ಟೇ ಚಿತ್ರಕ್ಕೆ ಸಂಬಂಧ ಪಟ್ಟ ಎಲ್ಲ ಕೆಲಸಗಳು ನಡೆದಿದ್ದರು ಸಹ ಈ ಚಿತ್ರದ ಟೈಟಲ್ ಮಾತ್ರ ಇನ್ನು ನಿಕ್ಕಿ ಆಗಿಲ್ಲ. ಚಿತ್ರತಂಡದವರಿಂದಲೂ ಸಹ ಅಂತಹ ಮಾಹಿತಿ ಮಾಧ್ಯಮಗಳಿಗೆ ಸಿಕ್ಕಿಲ್ಲ. 
 
ಸಿನಿಮಾದ ಟೈಟಲ್‌ 'ಅಧಿಪತಿ' ಎಂಬ ಭಿನ್ನ ಭಿನ್ನ ಪೋಸ್ಟರ್‌ ಡಿಸೈನ್‌ ಮಾಡಿ ಫೇಸ್‌ಬುಕ್‌ನಲ್ಲಿ ಹರಿಬಿಡುತ್ತಿದ್ದಾರೆ.  'ಪಾಂಚಜನ್ಯ' ಎಂಬ ಟೈಟಲ್‌ ಇಡಲಾಗಿದೆ ಎಂಬ ಸುದ್ದಿಯೂ ಇದೆ. ಒಟ್ಟಾರೆ ಸಿನಿಮಾ ಪ್ರೇಕ್ಷಕರ ಮುಂದೆ ಬರುವಾಗ ಟೈಟಲ್‌  ಸಮೇತ ಬಂದೆ ಬರುತ್ತೆ ಬಿಡಿ  ಅನ್ನುವುದು ಅವರ ಅಭಿಮಾನಿಗಳ ಮಾತು. 
 
ಈಗಾಗಲೇ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ ನಾಯಕಿಯಾಗಿ ತ್ರಿಶಾ ನಟಿಸುತ್ತಿದ್ದಾರೆ. ಮೂಲ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರವನ್ನು ಪ್ರಕಾಶ್‌ ರೈ ಮಾಡಿದ್ದರು. ಇಡೀ ಸಿನಿಮಾದಲ್ಲಿ ನಾಯಕನಿಗೆ ಎಷ್ಟು ಪ್ರಾಮುಖ್ಯತೆ ಇತ್ತೋ, ತಂದೆ ಪಾತ್ರಕ್ಕೂ ಅಷ್ಟೇ ಇತ್ತು.  ತೆಲುಗಿನ ಶಿವಾಜಿ ಪ್ರಭು ನಟಿಸಿದ್ದಾರೆ. ಪುನೀತ್‌ ತಂದೆಯ ಪಾತ್ರ ಮಾಡುವ ಮೂಲಕ ಮತ್ತೂಮ್ಮೆ ಕನ್ನಡಲ್ಲಿ ನಟಿಸಿದ್ದಾರೆ ಪ್ರಭು. ಈ ಚಿತ್ರ ಜೂನ್ ನಲ್ಲಿ ತೆರೆ ಕಾಣುವ ಸಾಧ್ಯತೆ ಇದೆ. 

ವೆಬ್ದುನಿಯಾವನ್ನು ಓದಿ