‘ಪ್ರೀಮಿಯರ್ ಪದ್ಮಿನಿ’ ಟೀಂ ಜೊತೆ ಜಗ್ಗೇಶ್ ಮತ್ತೊಂದು ಸಿನಿಮಾ

ಶನಿವಾರ, 25 ಸೆಪ್ಟಂಬರ್ 2021 (09:35 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಈಗ ಮತ್ತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಂಗನಾಯಕ, ತೋತಾಪುರಿ ಬಳಿಕ ಜಗ್ಗೇಶ್ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದರು.


ಇದರ ಬಳಿಕ ಜಗ್ಗೇಶ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿರುವ ಸುದ್ದಿ ಬಹಿರಂಗಪಡಿಸಿದ್ದಾರೆ. ರಮೇಶ್ ಇಂದಿರಾ, ಶ್ರುತಿ ನಾಯ್ಡು ನಿರ್ಮಾಣ, ನಿರ್ದೇಶನದಲ್ಲಿ ಇದಕ್ಕೂ ಮೊದಲು ಜಗ್ಗೇಶ‍್ 'ಪ್ರೀಮಿಯರ್ ಪದ್ಮಿನಿ’ ಸಿನಿಮಾ ಮಾಡಿದ್ದರು. ಇದು ಜಗ್ಗೇಶ್ ಗೆ ವಿಶೇಷ ಇಮೇಜ್ ತಂದುಕೊಟ್ಟಿತ್ತು.

ಈಗ ಜಗ್ಗೇಶ್ ಅದೇ ತಂಡದೊಂದಿಗೆ ಮತ್ತೊಂದು ಸಿನಿಮಾ ಮಾಡಲಿದ್ದಾರಂತೆ. ಇದರ ಕತೆ ಈಗಾಗಲೇ ಕೇಳಿದ್ದೇನೆ. ಇಷ್ಟವಾಗಿದೆ. ಮತ್ತೊಂದು ಚಿತ್ರ ಕನ್ನಡಿಗರ ಮನಗೆಲ್ಲಲು ಸರತಿಯಲ್ಲಿದೆ ಎಂದಿದ್ದಾರೆ ಜಗ್ಗೇಶ‍್. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ