ಥಿಯೇಟರ್ ಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅಸ್ತು: ಆದರೆ ಷರತ್ತುಗಳು ಅನ್ವಯ!

ಶನಿವಾರ, 25 ಸೆಪ್ಟಂಬರ್ 2021 (08:54 IST)
ಬೆಂಗಳೂರು: ಸ್ಯಾಂಡಲ್ ವುಡ್ ಮಂದಿ ಕಾಯುತ್ತಿದ್ದ ಶುಭ ಸುದ್ದಿ ಕೊನೆಗೂ ಸರ್ಕಾರ ನೀಡಿದೆ. ಥಿಯೇಟರ್ ಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅವಕಾಶ ನೀಡಲು ಸರ್ಕಾರ ಒಪ್ಪಿದೆ. ಆದರೆ ಕೆಲವು ಷರತ್ತುಗಳು ಅನ್ವಯವಾಗಲಿದೆ.


ಅಕ್ಟೋಬರ್ 1 ರಿಂದ ಥಿಯೇಟರ್ ಗಳನ್ನು ಸಂಪೂರ್ಣ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಶೇ.1 ಕ್ಕಿಂತ ಕಡಿಮೆ ಪಾಸಿಟಿವಿಟಿ ಇದ್ದ ಭಾಗದಲ್ಲಿ ಮಾತ್ರ 100% ಪ್ರೇಕ್ಷಕರಿಗೆ ಅವಕಾಶ ನೀಡಬಹುದಾಗಿದೆ.

ಇನ್ನು, ಗರ್ಭಿಣಿಯರು, ಮಕ್ಕಳಿಗೆ ಸದ್ಯಕ್ಕೆ ಥಿಯೇಟರ್ ಗೆ ಪ್ರವೇಶವಿಲ್ಲ. ಒಂದು ವೇಳೆ ಪಾಸಿಟಿವಿಟಿ ದರ ಶೇ.2 ಕ್ಕಿಂತ ಜಾಸ್ತಿ ಕಂಡುಬಂದರೆ ಅಂತಹ ಪ್ರದೇಶಗಳಲ್ಲಿ ಥಿಯೇಟರ್ ಬಂದ್ ಮಾಡಬೇಕಾಗುತ್ತದೆ. ಇನ್ನು, ಥಿಯೇಟರ್ ಗಳಲ್ಲಿ ಸಿಬ್ಬಂದಿ, ಆಸನಗಳಿಗೆ ಸ್ಯಾನಿಟೈಸೇಷನ್ ಕಡ್ಡಾಯ. ಇವೆಲ್ಲಾ ಷರತ್ತುಗಳನ್ನು ಮನದಲ್ಲಿಟ್ಟುಕೊಂಡು ಥಿಯೇಟರ್ ತೆರೆಯಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ