ಅಮೆರಿಕಾದಲ್ಲಿ ನಟ ಜಗ್ಗೇಶ್ ಏಕಾಂಗಿ ಪ್ರವಾಸ

ಗುರುವಾರ, 1 ಜೂನ್ 2023 (10:22 IST)
Photo Courtesy: Twitter
ಬೆಂಗಳೂರು: ನವರಸನಾಯಕ ಜಗ್ಗೇಶ್ ಇದೀಗ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದು, ಅಮೆರಿಕಾ ಪ್ರವಾಸ ಮಾಡಿದ್ದಾರೆ.

ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಹಿಟ್ ಆಗಿತ್ತು. ಇದಾದ ಬಳಿಕ ಜಗ್ಗೇಶ್ ಕೊಂಚ ಬಿಡುವಾಗಿದ್ದಾರೆ. ಅತ್ತ ರಿಯಾಲಿಟಿ ಶೋಗಳೂ ಇಲ್ಲ.

ಈ ನಡುವೆ ಅಮೆರಿಕಾ ಪ್ರವಾಸ ಮಾಡಿದ್ದು, ಅಮೆರಿಕಾದಲ್ಲಿ ಏಕಾಂಗಿ ಪ್ರಯಾಣ ಮಾಡುತ್ತಿರುವೆ ಎಂದು ವಿಡಿಯೋ ಪ್ರಕಟಿಸಿದ್ದಾರೆ. ಜಗ್ಗೇಶ್ ಗೆ ಇಲ್ಲಿ ಆಪ್ತ ಸ್ನೇಹಿತರಿದ್ದು, ಆಗಾಗ ಅಮೆರಿಕಾಗೆ ಪ್ರವಾಸ ಮಾಡುತ್ತಿರುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ