ಇಂದು ನನ್ನ ಪಾಲಿಗೆ ವಿಶೇಷ ದಿನ: ಸ್ಪೆಷಲ್ ಸುದ್ದಿ ಹಂಚಿಕೊಂಡ ಮೇಘನಾ ಸರ್ಜಾ
ಅದರ ಜೊತೆಗೆ ಮೇಘನಾ ಈಗ ತಮ್ಮ ಜೀವನದ ಮತ್ತೊಂದು ಮಹತ್ವದ ಗಳಿಗೆ ಬಗ್ಗೆ ಅಭಿಮಾನಿಗಳೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.
ಚಿರು ಪುತ್ರ ರಾಯನ್ ಸರ್ಜಾ ಈಗ ಶಾಲೆಗೆ ಹೋಗುವ ಸಂಭ್ರಮದಲ್ಲಿದ್ದಾನೆ. ಪುತ್ರನ ಶಾಲೆಯ ಮೊದಲ ದಿನದ ಸಂಭ್ರಮವನ್ನು ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪೋಷಕಳಾಗಿ ನನಗಿದು ವಿಶೇಷ ದಿನ. ಈ ಖುಷಿಯನ್ನು ನನಗೆ ಮಾತುಗಳಲ್ಲಿ ಹೇಳಲಾಗುತ್ತಿಲ್ಲ. ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದಿದ್ದಾರೆ.