ಜಗ್ಗು ದಾದಾ ಸಿನಿಮಾದ ಶೂಟಿಂಗ್ ಆರಂಭ

ಬುಧವಾರ, 26 ಆಗಸ್ಟ್ 2015 (11:18 IST)
ಜಗ್ಗು ದಾದಾ. 2015  ಫೆಬ್ರವರಿ 16ಕ್ಕೆ ಈ ಸಿನಿಮಾ ತನ್ನ ಮುಹೂರ್ತ ನೆರವೇರಿಸಿತ್ತು. ಆದ್ರೆ ಮುಹೂರ್ತದ ವೇಳೆ ಸದ್ದು ಮಾಡಿದ್ದ ಚಿತ್ರ ಭಲಿಕ ಸದ್ದೇ ಮಾಡಿರಲಿಲ್ಲ. ಆದ್ರೀಗ ಈ ಸಿನಿಮಾ ತಂಡ ಶೂಟಿಂಗ್ ಆರಂಭಿಸಿದೆ.

 
ಜಗ್ಗು ದಾದಾ ಸಿನಿಮಾದಲ್ಲಿ ದರ್ಶನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾಕ್ಕೆ  ಜಗ್ಗು ದಾದಾ ಅಂತಾ ಹೆಸರಿಟ್ಟಿರೋದು  ಚಿತ್ರದ ನಾಯಕ ದರ್ಶನ್ ಅಂತೆ. ನಿರ್ದೇಶಕ ರಾಘವೇಂದ್ರ ಹೆಗಡೆ ಅವರ ಚೊಚ್ಚಲ ನಿರ್ದೇಶನದ ಸಿನಿಮಾ 'ಜಗ್ಗು ದಾದಾ'. ಜಗ್ಗು ದಾದಾ ರೌಡಿಸಂ ಹಿನ್ನೆಲೆಯುಳ್ಳ ಸಿನಿಮಾವಂತೆ. ಸಿನಿಮಾವನ್ನು ತಾತ ಹಾಗೂ ಮೊಮ್ಮಗನ ನಡುವಿನ ಬಾಂಧವ್ಯದ ಎಳೆಯನ್ನು ಇಟ್ಟುಕೊಂಡು ನಿರ್ಮಿಸಲಾಗಿದೆಯಂತೆ.
 
ಇನ್ನು ಸಿನಿಮಾದಲ್ಲಿ ದರ್ಶನ್ ಐವರು ನಾಯಕಿರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಗಾಯತ್ರಿ ಅಯ್ಯರ್ ಹಾಗೂ ದೀಕ್ಷಾ ಸೇಠ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಕ್ಕೆ ಯೂನುಸ್ ಸಾಜ್ವಾಲ್ ಚಿತ್ರಕಥೆ ಬರೆದಿದ್ದು, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಸಿನಿಮಾದಲ್ಲಿ ಊರ್ವಶಿ, ರಾಜ್ ಸಿಂಗ್ ಬೇಡಿ, ರವಿಶಂಕರ್, ಶರತ್ ಲೋಹಿತಾಶ್ವ ಮತ್ತು ಬುಲೆಟ್ ಪ್ರಕಾಶ್ ಮುಂತಾದವರು ಕಾಣಿಸಿಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ