ಬಿಗ್ ಬಾಸ್ ಕನ್ನಡ: ಶೋನಿಂದ ಹೊರಬಿದ್ದ ಜೈ ಜಗದೀಶ್
ಟಾಸ್ಕ್ ಸಂದರ್ಭದಲ್ಲಿ ಜೈ ಜಗದೀಶ್ ಸದಾ ಟೀಕೆಗೊಳಗಾಗುತ್ತಿದ್ದರು ಇಲ್ಲವೇ ಕಳಪೆ ಪ್ರದರ್ಶನ ನೀಡುತ್ತಿದ್ದರು. ಕೆಲವೊಮ್ಮೆ ವಾದ ವಿವಾದಗಳಾದಾಗ ನನ್ನ ಒಮ್ಮೆ ಮನೆಯಿಂದ ಹೊರ ಕಳುಹಿಸಿ. ಸಾಕು, ನಾನು ಹೋಗಿಬಿಡ್ತೇನೆ ಎನ್ನುತ್ತಿದ್ದರು. ಅವರು ಅಂದಿದ್ದಕ್ಕೂ ಈ ವಾರ ಎಲಿಮಿನೇಷನ್ ಆಗಿದ್ದಕ್ಕೂ ಸರಿ ಹೋಗಿದೆ. ಅದರಲ್ಲೂ ಈ ವಾರ ಭೂಮಿ ಶೆಟ್ಟಿ ಟೀ ಶರ್ಟ್ ಎಳೆದ ವಿವಾದದಲ್ಲಿ ಅವರ ಹೆಸರು ಬಂದಿದ್ದು ಅವರಿಗೆ ತೀವ್ರ ಬೇಸರವುಂಟುಮಾಡಿತ್ತು.