ಜೈಲರ್ ನಟ ವಿನಾಯಕನ್ ಕುಡಿದ ಮತ್ತಿನಲ್ಲಿ ಲುಂಗಿ ಉದುರಿದರೂ ಕ್ಯಾರೇ ಇಲ್ಲ: ವಿಡಿಯೋ

Krishnaveni K

ಬುಧವಾರ, 22 ಜನವರಿ 2025 (09:42 IST)
Photo Credit: X
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ನಾಯಕರಾಗಿರುವ ಜೈಲರ್ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದ ನಟ ವಿನಾಯಕನ್ ಕುಡಿದ ಮತ್ತಿನಲ್ಲಿ ಬಾಲ್ಕನಿಯಲ್ಲಿ ಅರೆನಗ್ನನಾಗಿ ಅಸಭ್ಯ ವರ್ತನೆ ತೋರಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೇವಲ ತುಂಡು ಬಟ್ಟೆಯಲ್ಲಿರುವ ವಿನಾಯಕನ್ ಕುಡಿದ ಮತ್ತಿನಲ್ಲಿ ಬಾಲ್ಕನಿಯಲ್ಲಿ ತೂರಾಡಿಕೊಂಡು ನೆಲದ ಮೇಲೆಯೇ ಮಲಗಿಕೊಂಡು ಬಳಿಕ ನೆರೆಹೊರೆಯವರಿಗೆ ವಾಚಮಗೋಚರವಾಗಿ ಕೂಗಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜೈಲರ್ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದ ಅವರ ಅಭಿನಯ ನೋಡಿ ಚಿತ್ರರಂಗಕ್ಕೊಬ್ಬ ಖಡಕ್ ವಿಲನ್ ಸಿಕ್ಕಿದ್ದಾನೆ ಎಂದು ಮೆಚ್ಚಿಕೊಂಡಿದ್ದರು. ಆದರೆ ನಿಜ ಜೀವನದಲ್ಲೂ ಅವರು ಬೇಡದ ಕಾರಣಗಳಿಂದಲೇ ಸುದ್ದಿಯಾಗುತ್ತಿರುವುದು ವಿಪರ್ಯಾಸ. ಕುಡಿದ ಮತ್ತಿನಲ್ಲಿ ತಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವೇ ಇಲ್ಲದೇ ಅಸಭ್ಯ ವರ್ತನೆ ತೋರಿದ್ದಾರೆ.
ಸೊಂಟದ ಮೇಲಿದ್ದ ತುಂಡು ಲುಂಗಿ ಉದುರಿದರೂ ಅವರಿಗೆ ಗಮನವಿಲ್ಲ. ನೆರೆಹೊರೆಯವರಿಗೆ ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ವಿಶೇಷವೆಂದರೆ ತಮ್ಮ ವರ್ತನೆಯನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಸಿನಿಮಾ ನಟನಾಗಿ ಎಷ್ಟೋ ವಿಷಯಗಳನ್ನು ನಿಭಾಯಿಸಲು ನನಗೆ ಸಾಧ್ಯವಾಗುತ್ತಿಲ್ಲ. ನನ್ನಿಂದಾಗಿ ನೆಗೆಟಿವ್ ವಾತಾವರಣ ಉಂಟಾಗಿದ್ದಕ್ಕೆ ಜನರ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಆದರೆ ನಟನ ವರ್ತನೆ ನೋಡಿ ಇವನೇನು ನಟನೋ, ಕುಡುಕನೋ ಎಂದು ಕಿಡಿ ಕಾರಿರುವ ಸಾರ್ವನಿಕರು ಇಂತಹವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Jailer Villain Vinayakan Fully Intoxicated ????pic.twitter.com/dkWltPZKeh

— Arun Vijay (@AVinthehousee) January 21, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ