ಬೆಂಗಳೂರು: ಅರಮನೆ ಮೈದಾನದಲ್ಲಿಗಾಲಿ ಜನಾರ್ಧನ ರೆಡ್ಡಿ ಮಗಳು ಬ್ರಹ್ಮಿಣಿ ಅವರ ಅದ್ಧೂರಿ ವಿವಾಹ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಅಚ್ಚುಕಟ್ಟಾಗಿ ಮಾಡಿದ ಅದ್ಧೂರಿ ವಿವಾಹದಲ್ಲಿ ಯಡವಟ್ಟುಗಳ ಸರಮಾಲೆಯೂ ಇದೆ.
ರಾಜಕಾರಣಿಯೊಬ್ಬರು ಮೈಕ್ ಮುಂದೆ ನಿಂತು ವದೂ ವರರಿಗೆ ಶುಭಹಾರೈಸುವಾಗ ಜನಾರ್ಧನ ರೆಡ್ಡಿ ಮಗಳಿಗೆ ವಿವಾಹದ ಶುಭಾಶಯ ಎನ್ನುವ ಬದಲು, ಹುಟ್ಟು ಹಬ್ಬದ ಶುಭಾಷಯ ಎಂದು ಎಡವಟ್ಟು ಮಾಡಿಕೊಂಡರು.
ಇನ್ನೊಂದೆಡೆ ವಿವಾಹ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರೂ ಆಗಮಿಸಿ ದಂಪತಿಗೆ ಶುಭ ಹಾರೈಸಿದ್ದಾರೆ. ಕನ್ನಡ ಚಿತ್ರರಂಗದಿಂದ ಕ್ರೇಜಿಸ್ಟಾರ್ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್, ಪ್ರಣಯ ರಾಜ ಶ್ರೀನಾಥ್, ದ್ವಾರಕೀಶ್, ಹಿರಿಯ ನಟ ಜಯಂತಿ, ತಮಿಳು ನಟ ವಿಶಾಲ್, ತೆಲುಗಿನ ಬ್ರಹ್ಮಾನಂದ ಶರತ್ ಬಾಬು ಸೇರಿಂದತೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದಾರೆ.
ವಿವಾಹ ಸಮಾರಂಭದಲ್ಲಿ ಕನ್ನಡ ಹಾಡುಗಳನ್ನು ತೆಲುಗು ಹಾಡುಗಾರರಿಂದ ಹಾಡುಗಾರರಿಂದ ಹಾಡಿಸಿ ಜನಾರ್ಧನ ರೆಡ್ಡಿ ಕನ್ನಡ ಪ್ರೇಮ ಮೆರೆದರು! ಇದು ಕನ್ನಡ ಹಾಡೋ ತೆಲುಗು ಹಾಡೋ ಎಂದು ನಿಮಗೆ ಸಂಶಯ ಬಂದರೆ ಕ್ಷಮಿಸಿಬಿಡಬೇಕು!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ