ಚಂದನವನದಲ್ಲಿ ಜೋರಾಗಿ ನಡೆಯುತ್ತಿದೆ 'ಜಾತ್ರೆ'ಗೆ ಸಿದ್ಧತೆ

ಬುಧವಾರ, 5 ಆಗಸ್ಟ್ 2015 (09:53 IST)
ಚಂದನವನದಲ್ಲಿ ಕಲರ್ ಫುಲ್ ಜಾತ್ರೆ ಒಂದನ್ನು ನೋಡೋ ಅವಕಾಶ ಕನ್ನಡಿಗರಿಗೆ ಆದಷ್ಟು ಬೇಗ ಒದಗಿ ಬರಲಿದೆ. ಪ್ರೇಮಿಸಂ ಹಾಗೂ ಹುಚ್ಚು ಹುಡುಗ್ರು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಅಭಿಮಾನಿಗಳ ದಿಲ್ ಕದ್ದಿದ್ದ ನಟ ಚೇತನ್ ಚಂದ್ರ ಇದೀಗ ಜಾತ್ರೆ ಅನ್ನೋ ಸಿನಿಮಾ ಮೂಲಕ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.
ಇನ್ನು ಜಾತ್ರೆ ಸಿನಿಮಾ ಆಕ್ಷನ್ ಲವ್ ಹೀಗೆ ಎಲ್ಲಾ ಎಲಿಮೆಂಟ್ಸ್ ಇರೋ ವಿಭಿನ್ನ ಸಿನಿಮಾವಾಗಿದ್ದು, ಸಿನಿಮಾದಲ್ಲಿ ಚೇತನ್ ಚಂದ್ರಗೆ ನಾಯಕಿಯಾಗಿ ಐಶ್ವರ್ಯ ನಾಗ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತನ್ನ ಆಡಿಯೋ ಲಾಂಚ್ ಮಾಡಿರುವ ಸಿನಿ ತಂಡ ಆಡಿಯೋ ಜೊತೆಗೆ ಎರಡು ಸಾಂಗ್ ಹಾಗೂ ಟೀಸರ್ ನ್ನು ಕೂಡ ರಿಲೀಸ್ ಮಾಡಿದೆ. ಅಲ್ಲದೇ ಸಿನಿಮಾದಲ್ಲಿ ಒಂದು ಹಾಡನ್ನು ಪುನೀತ್ ರಾಜ್ ಕುಮಾರ್ ಹಾಡಿದ್ದಾರಂತೆ.
 
ಜಾತ್ರೆ ಸಿನಿಮಾವನ್ನು ರವಿತೇಜಾ ಅನ್ನೋರು ನಿರ್ದೇಶಿಸಿದ್ದು, ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಈಗಾಗ್ಲೇ ಸಾಂಗ್ಸ್ , ಟೀಸರ್ ನಿಂದ ಅಭಿಮಾನಿಗಳನ್ನು ಸೆಳೆಯುತ್ತಿರುವ ಜಾತ್ರೆ ಟೀಮ್ ಸೆಪ್ಟಂಬರ್ ನಲ್ಲಿ ಪ್ರೇಕ್ಷಕರೆದುರಿಗೆ ಬರಲಿದೆ.

ವೆಬ್ದುನಿಯಾವನ್ನು ಓದಿ