ಜಯರಾಂ ಕಾರ್ತಿಕ್‌ರ ಬೆಂಗಳೂರು 560023 ಆಡಿಯೋ ಬಿಡುಗಡೆ

ಮಂಗಳವಾರ, 25 ನವೆಂಬರ್ 2014 (12:41 IST)
ಬೆಂಗಳೂರು 560023 ಚಿತ್ರದ ಆಡಿಯೋವನ್ನು   ನಟ ನಿರ್ದೇಶಕ ಸುದೀಪ್ ಅವರು ಬಿಡುಗಡೆ ಮಾಡಿದರು. ಕಾರ್ಯಕ್ರಮ ಬೆಂಗಳೂರಿನ ಜ್ಞಾನ ಗಂಗೋತ್ರಿಯಲ್ಲಿ ಅದ್ಧೂರಿಯಿನ ನಡೆಯಿತು. ಇದು ತಮಿಳು ಹಿಟ್ ಚಿತ್ರ ಚೆನ್ನೈ 600028ನ ರೀಮೇಕ್ ಆಗಿದೆ. 
 
ಕನ್ನಡ ಕಿರುತೆರೆಯಲ್ಲಿ ತಮಗೊಂದು ಸ್ಥಾನ ಗಳಿಸಿಕೊಂಡಿರುವ ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್  ಮತ್ತು ಚಂದನ್ ಈ ಚಿತ್ರದ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಈ ಚಿತ್ರದ ಆಡಿಯೋ ಕಾರ್ಯಕ್ರಮಕ್ಕೆ ಕೇವಲ ನಟರು ಮಾತ್ರವಲ್ಲ ಚಲನಚಿತ್ರರಂಗಕ್ಕೆ ಸೇರದವರು ಸಾಹಿತ ಬಂದು ಹಾರೈಸಿದರು. 
 
ಅವರಲ್ಲಿ ಮೇಯರ್ ಶಾಂತಮ್ಮ, ಮಾಜಿ ಕ್ರಿಕೆಟ್ ಆಟಗಾರ ಸೈಯದ್ ಕಿರ್ಮಾನಿ ಸೇರಿದ್ದಾರೆ. ಅಲ್ಲದೆ  ಕಾರ್ಯಕ್ರಮದಲ್ಲಿ ಫಿಲಂ ಚೇಂಬರ್ ಆಫ್ ಕಾಮರ್ಸ್  ನ ಅಧ್ಯಕ್ಷರಾಗಿರುವ ಹೆಚ್. ಡಿ. ಗಂಗರಾಜು ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ದಿಶ ಪೂವಯ್ಯ, ಶಿವಾನಿ, ಚಿಕ್ಕಣ್ಣ ಮುಂತಾದವರು ಭಾಗವಹಿಸಿದ್ದರು. 
 

ವೆಬ್ದುನಿಯಾವನ್ನು ಓದಿ