ಆಸ್ಕರ್ ಅವಾರ್ಡ್ ಬಳಿಕ ತವರಿಗೆ ಮರಳಿದ ಜ್ಯೂ.ಎನ್ ಟಿಆರ್

ಬುಧವಾರ, 15 ಮಾರ್ಚ್ 2023 (10:39 IST)
Photo Courtesy: Twitter
ಹೈದರಾಬಾದ್: ಆರ್ ಆರ್ ಆರ್ ಸಿನಿಮಾದ ನಾಟ್ಟು ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ನಾಯಕ ನಟರಲ್ಲೊಬ್ಬರಾದ ಜ್ಯೂ.ಎನ್ ಟಿಆರ್ ತವರಿಗೆ ಮರಳಿದ್ದಾರೆ.

ಸೋಮವಾರ ಮುಂಜಾನೆ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಚಿತ್ರತಂಡದವರೊಂದಿಗೆ ಜ್ಯೂ.ಎನ್ ಟಿಆರ್ ಕೂಡಾ ಭಾಗಿಯಾಗಿದ್ದರು. ಇದೀಗ ಅವರು ಹೈದರಾಬಾದ್ ಗೆ ಬಂದಿಳಿದಿದ್ದಾರೆ. ಅವರ ಜೊತೆಗೆ ಕೊರಿಯಾಗ್ರಫರ್ ಪ್ರೇಮ್ ರಕ್ಷಿತ್ ಕೂಡಾ ಬಂದಿದ್ದಾರೆ.

ತವರಿಗೆ ಬಂದ ಬಳಿಕ ಮಾಧ‍್ಯಮಗಳ ಮುಂದೆ ಮಾತನಾಡಿರುವ ಜ್ಯೂ.ಎನ್ ಟಿಆರ್ ‘ಕೀರವಾಣಿ ಮತ್ತು ಚಂದ್ರಬೋಸ್ ಆಸ್ಕರ್ ಪ್ರಶಸ್ತಿ ಪಡೆಯುವುದನ್ನು ನೋಡಿದ್ದು ನನಗೆ ಹೆಮ್ಮೆಯ ಅನುಭವ ಕೊಟ್ಟಿತು. ನಮ್ಮನ್ನು ಪ್ರೋತ್ಸಾಹಿಸಿದ ಎಲ್ಲಾ ಭಾರತೀಯರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಈ ಸಾಧನೆ ನಮ್ಮ ಚಿತ್ರರಂಗದ ಪ್ರೀತಿಯಿಂದಲೇ ಸಾಧ‍್ಯವಾಗಿದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ