ಆಸ್ಕರ್ ಗೆದ್ದ ಬಳಿಕ ರಾಜಮೌಳಿ ಲಾಸ್ ಏಂಜಲೀಸ್ ಮನೆಯಲ್ಲಿ ಏನಾಯ್ತು?

ಮಂಗಳವಾರ, 14 ಮಾರ್ಚ್ 2023 (09:10 IST)
Photo Courtesy: Twitter
ಲಾಸ್ ಏಂಜಲೀಸ್: ನಿನ್ನೆಯಷ್ಟೇ ಆರ್ ಆರ್ ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿತ್ತು. ಪ್ರಶಸ್ತಿ ಗೆದ್ದ ಬಳಿಕ ನಿರ್ದೇಶಕ ರಾಜಮೌಳಿ ತಮ್ಮ ನಿವಾಸದಲ್ಲಿ ಮಾಡಿದ್ದೇನು ಗೊತ್ತಾ?

ಲಾಸ್ ಏಂಜಲೀಸ್ ನಲ್ಲಿರುವ ರಾಜಮೌಳಿ ಮನೆಯಲ್ಲಿ ನಿನ್ನೆ ಸಂಭ್ರಮ ಮೇರೆ ಮೀರಿತ್ತು. ರಾಜಮೌಳಿ ತಮ್ಮ ತಂಡದವರಿಗಾಗಿ ವಿಶೇಷ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಎಂ.ಎಂ. ಕೀರವಾಣಿ, ಜ್ಯೂ.ಎನ್ ಟಿಆರ್, ರಾಮ್ ಚರಣ್ ತೇಜ ದಂಪತಿ ಸೇರಿದಂತೆ ಇಡೀ ಆರ್ ಆರ್ ಆರ್ ಫ್ಯಾಮಿಲಿ ಭಾಗಿಯಾಗಿತ್ತು.

ಈ ಪಾರ್ಟಿಗಾಗಿ ರಾಜಮೌಳಿ ಮನೆ ವಿಶೇಷವಾಗಿ ಸಿಂಗಾರಗೊಂಡಿತ್ತು. ಪಾರ್ಟಿಯಲ್ಲಿ ಎಂ.ಎಂ. ಕೀರವಾಣಿ ಪಿಯಾನೋ ನುಡಿಸುತ್ತಾ, ಹಾಡುತ್ತಾ ಎಲ್ಲರನ್ನೂ ಖುಷಿಪಡಿಸಿದ್ದಾರೆ. ಇನ್ನು, ರಾಮ್ ಚರಣ್ ತೇಜ ಆರ್ ಆರ್ ಆರ್ ಸಿನಿಮಾಗೆ ಇದುವರೆಗೆ ಸಿಕ್ಕ ಎಲ್ಲಾ ಪ್ರಶಸ್ತಿಗಳನ್ನೂ ಒಟ್ಟು ಸೇರಿಸಿ ಅವುಗಳ ಮುಂದೆ ಫೋಟೋ ತೆಗೆಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ