ಸ್ಯಾಂಡಲ್‌ವುಡ್‌ನ 'ಚಾಲಾಕಿ'ಯಲ್ಲಿ ನಟಿಸಲು ಕಬೀರ್ ಸಿಂಗ್ ಸಮ್ಮತಿ

ಗುರುವಾರ, 2 ಏಪ್ರಿಲ್ 2015 (10:15 IST)
ಇತ್ತೀಚಿನ ಗೋಪಿಚಂದ್ ಅಭಿನಯದ ತೆಲುಗು ಚಿತ್ರ ಜಿಲ್ ಹಾಗೂ ಕಿಕ್ ಸಿನೆಮಾ ಮೂಲಕ ಎಂಟ್ರಿ ಆದ ಖಳ ನಟ ಕಬೀರ್ ಸಿಂಗ್ ಈಗ ದಕ್ಷಿಣ ಭಾರತದಲ್ಲಿ 3ನೇ ಚಿತ್ರ ಚಾಲಾಕಿ ಕನ್ನಡ ಸಿನೆಮಾದಲ್ಲಿ ಅಭಿನಯಿಸಲು ಸಮ್ಮತಿಸಿದ್ದಾರೆ. ಚೋಟಾ ನಾಯಕ್ ಪಾತ್ರದಲ್ಲಿ ಅಭಿನಯಿಸಿದ ಕಬೀರ್ ಸಿಂಗ್ ಸಿನಿಮಾ ಜಿಲ್ ಆಂಧ್ರ ಪ್ರದೇಶದಲ್ಲಿ ಜಯಭೇರಿ ಹೊಡೆಯುತ್ತಾ ಇದೆ.
ಕಬೀರ್ ಸಿಂಗ್ ಅವರು ನಾಯಕ ಪ್ರಜ್ವಲ್ ದೇವರಾಜ್ ಎದುರು ಅಭಿನಯಿಸುತ್ತಾ ಇದ್ದಾರೆ. ಪ್ರಜ್ವಲ್ ಅವರ ನಾಯಕಿಯಾಗಿ ನಾಯಕಿ ಆಗಿ ಸೋನಮ್ ಶೆಟ್ಟಿ ಆಯ್ಕೆ ಆಗಿದ್ದಾರೆ. ವೇಣುಗೋಪಾಲ್ ಚಿತ್ರದ ನಿರ್ದೇಶಕರು. ಪ್ರವೀಣ್ ಕುಮಾರ್ ನಿರ್ಮಾಣ ಮಾಡುತ್ತಿರುವ ಈ  ಚಿತ್ರಕ್ಕೆ ಪಿ ರಾಜನ್ ಅವರ ಛಾಯಾಗ್ರಹಣ, ಪ್ರೇಮ್ ಕುಮಾರ್ ಅವರ ಸಂಗೀತ, ದೀಪು ಅವರ ಸಂಕಲನ ಇದೆ. 

ವೆಬ್ದುನಿಯಾವನ್ನು ಓದಿ