ತಡವಾದ ಕಬ್ಜ ಟ್ರೈಲರ್: ಅಭಿಮಾನಿಗಳಿಂದ ಟ್ರೋಲ್
ಉಪೇಂದ್ರ ಅಭಿಮಾನಿಗಳು ನಿನ್ನೆಯಿಂದ ಕಬ್ಜ ಟ್ರೈಲರ್ ರಿಲೀಸ್ ಆಗುವ ಸಮಯವನ್ನೇ ಎದಿರು ನೋಡುತ್ತಿದ್ದಾರೆ. ಇಂದು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಟ್ರೈಲರ್ ರಿಲೀಸ್ ಮಾಡಲಿದ್ದಾರೆ ಎಂಬ ಸುದ್ದಿಯೂ ಬಂದಿದೆ.
ಆದರೆ ನಿಗದಿತ ಸಮಯ ಕಳೆದರೂ ಟ್ರೈಲರ್ ಲಾಂಚ್ ಆಗಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಿರ್ದೇಶಕ ಆರ್.ಚಂದ್ರುರನ್ನು ವಿವಿಧ ಮೆಮೆಗಳ ಮೂಲಕ ಟ್ರೋಲ್ ಮಾಡುತ್ತಿದ್ದಾರೆ. ತಾಂತ್ರಿಕ ಕಾರಣಗಳಿಂದಾಗಿ ಕಬ್ಜ ಟ್ರೈಲರ್ ರಿಲೀಸ್ ಕೊಂಚ ತಡವಾಗಿದೆ.