ಯುವರಾಜ್ ಕುಮಾರ್ ಚೊಚ್ಚಲ ಸಿನಿಮಾ ಟೈಟಲ್ ಘೋಷಣೆ

ಶುಕ್ರವಾರ, 3 ಮಾರ್ಚ್ 2023 (20:18 IST)
Photo Courtesy: Twitter
ಬೆಂಗಳೂರು: ಡಾ.ರಾಜ್ ಕುಮಾರ್ ವಂಶದ ಕುಡಿ ಯುವರಾಜ್ ಕುಮಾರ್ ಚೊಚ್ಚಲ ಸಿನಿಮಾದ ಟೈಟಲ್ ಇಂದು ಘೋಷಣೆಯಾಗಿದೆ.

ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಸಿನಿಮಾಗೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಮೂಲಕ ರಾಘವೇಂದ್ರ ರಾಜ್ ಕುಮಾರ್ ದ್ವಿತೀಯ ಪುತ್ರ ಬೆಳ್ಳಿ ತೆರೆಗೆ ಕಾಲಿಡುತ್ತಿದ್ದಾರೆ.

ಹೀಗಾಗಿ ಸಹಜವಾಗಿಯೇ ದೊಡ್ಮನೆ ಅಭಿಮಾನಿಗಳಲ್ಲಿ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಯುವರಾಜ್ ಕುಮಾರ್ ರನ್ನು ಪುನೀತ್ ರಾಜ್ ಕುಮಾರ್ ಉತ್ತರಾಧಿಕಾರಿ ಎಂಬಂತೆ ಅಭಿಮಾನಿಗಳು ಕಾಣುತ್ತಿದ್ದಾರೆ. ಇಂದು ಕುರುಬನಹಳ್ಳಿಯಲ್ಲಿ ಅಣ್ಣಾವ್ರ ಪ್ರತಿಮೆ ಮುಂದೆ ಟೈಟಲ್ ಘೋಷಣೆ ಮಾಡಲಾಗಿದೆ. ಇದೊಂದು ಯೂಥ್ ಫುಲ್ ಸ್ಟೋರಿ ಇರುವ ಸಿನಿಮಾ ಎನ್ನಲಾಗಿದೆ. ಇದೇ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ