ಕಾಜಲ್ ಅಗರ್ ವಾಲ್ ಮದುವೆ, ನಿಶ್ಚಿತಾರ್ಥದ ಸುದ್ದಿ ಕೇವಲ ವದಂತಿಯಂತೆ

ಗುರುವಾರ, 20 ಆಗಸ್ಟ್ 2020 (10:14 IST)
ಹೈದರಾಬಾದ್ : ನಟಿ ಕಾಜಲ್ ಅಗರ್ ವಾಲ್ ಮದುವೆಯಾಗುತ್ತಿರುವ ಸುದ್ದಿ ಕೇವಲ ವದಂತಿ ಎಂಬುದಾಗಿ ತಿಳಿದುಬಂದಿದೆ.

ಇತ್ತೀಚೆಗೆ ನಟಿ ಕಾಜಲ್ ಅಗರ್ ವಾಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇದೀಗ ಆ ಸುದ್ದಿ ವದಂತಿ ಎಂಬುದಾಗಿ ತಿಳಿದುಬಂದಿದೆ.

ನಟಿ ಕಾಜಲ್ ಸಿನಿಮಾ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದರಿಂದ ಮದುವೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸದ್ಯಕ್ಕೆ ಮದುವೆಯಾಗುವ ಸಾಧ್ಯತೆ ಇಲ್ಲ ಎಂದು ನಟಿ ಕಾಜಲ್ ಅವರ ವಕ್ತಾರ  ತಿಳಿಸುವುದರ ಮೂಲಕ ನಟಿಯ ಮದುವೆ ವದಂತಿಗೆ ಬ್ರೇಕ್ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ