ಸಣ್ಣಗಾಗಲು ಕಾಜಲ್ ಶತ ಪ್ರಯತ್ನ

ಶುಕ್ರವಾರ, 19 ಡಿಸೆಂಬರ್ 2014 (09:57 IST)
ದಕ್ಷಿಣ ಭಾರತದ ಮುದ್ದಿನ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹಿತ ಒಬ್ಬಳು. ಕಳೆದಕೆಲವು ವರ್ಷಗಳಿಂದ ತಮಿಳು ಮತ್ತು ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ತನಗೊಂದು ಸ್ಥಾನ ಪಡೆದಿರುವ ಈ ಮಾದಕ ಚೆಲುವೆ ತನ್ನ ತಾರ ಬದುಕಲ್ಲಿ ಏಳುಬೀಳು ಕಂಡಿದ್ದಾಳೆ. 
ಈಕೆ ಬಗ್ಗೆ  ಜನರು ತಮ್ಮ  ಕ್ರೇಜ್ ಕಡಿಮೆ ಮಾಡಿಕೊಂಡಿಲ್ಲ. ಹೀರೋಯಿನ್ ಆಗಿ ಎಂಟ್ರಿ ಆದ ಈ ಚೆಲುವೆ ಹಿರೋಯಿನ್ ಸ್ಥಾನವನ್ನು ಸಹಿತ ಬಿಟ್ಟುಕೊಟ್ಟಿಲ್ಲ. ಮುಖ್ಯವಾಗಿ ಆಕೆ ತಾನು ಸಿನಿಮಾರಂಗಕ್ಕೆ ಎಂಟ್ರಿ ಆದಾಗ  ಹೇಗೆ ಇದ್ದಳೋ ಅದೇರೀತಿ  ಸ್ಲಿಮ್ ಮತ್ತು ಸ್ವೀಟ್ ಆಗಿದ್ದಾಳೆ. ಆಕೆ ಆಗ  ಯಾವ ರೀತಿ ತನ್ನ ಫಿಗರ್ ಮೇಯಿನ್ ಟೆನ್  ಮಾಡಿದ್ದಳೋ ಅದೇರೀತಿ ಈಗಲೂ ಮಾಡ್ತಾ ಇದ್ದಾಳೆ.ಆದರೂ ಈಗ ಈ ಚೆಲುವೆ ಸ್ವಲ್ಪ ದಪ್ಪಗಾಗಿ ಬಿಟ್ಟಿದ್ದಾಳೆ.ಆದ್ದರಿಂದ ಆಕೆ ತನ್ನ ದೇಹದ  ಅನಗತ್ಯ ತೂಕ ಕಡಿಮೆ ಮಾಡಿ ಕೊಳ್ಳುತ್ತಿದ್ದಾಳೆ. 
 
ಆದರೆಕಳೆದ ಆರು ತಿಂಗಳುಗಳಿಂದ ಮಾಡಿದ ಪ್ರಯತ್ನಗಳು ವ್ಯರ್ಥವಾಗಿ ಈಗ ಸಣ್ಣಗಾಗಲು ಸರ್ಜರಿಗೆ ಆದ್ಯತೆ ಕೊಟ್ಟಿದ್ದಾಳೆ. ಈಕೆಗೆ ತನ್ನ ರೂಪವನ್ನು ಸರ್ಜರಿ ಮೂಲಕ ಸರಿ ಪಡಿಸಿಕೊಳ್ಳುವ ಇಚ್ಛೆ ಈ ಮೊದಲು ಹೊಂದಿರಲಿಲ್ಲ. ಎಲ್ಲರಿಗೂ ಗೊತ್ತು ಒಮ್ಮೆ ಸೌಂದರ್ಯಕ್ಕೆ ಸಂಬಂಧಪಟ್ಟ ಸರ್ಜರಿಯ ಕಾರಣದಿಂದ ಸ್ಟಾರ್ಗಳು ತಮ್ಮ ರೂಪವನ್ನು ಹಾಲು ಮಾಡಿಕೊಂಡಿದ್ದಾರೆ. ಆ ರೀತಿ ಆಗಲು ಕಾಜಲ್ ಇಷ್ಟ ಪಡದೆ ಇದ್ದರು ಈಗ ಪರಿಸ್ಥಿತಿ ಆಕೆಗೆ ಆ ನಿರ್ಧಾರ ತೆಗೆದುಕೊಳ್ಳುವಂತೆ ಆಗಿದೆ. 
 
ಈಕೆ ತನ್ನ ಸೊಂಟದ ಭಾಗದಲ್ಲಿ ಸೇರ್ಪಡೆ ಆಗಿರುವ ಅನಗತ್ಯ ಕೊಬ್ಬು ನಿವಾರಿಸುವತ್ತ ಗಮನ ನೀಡಿದ್ದಾಳಂತೆ.  ಮುಖದಲ್ಲೂ ಸ್ವಲ್ಪ ಮಟ್ಟಿಗೆ ಬದಲಾವಣೆಗೆ ಆದ್ಯತೆ ನೀಡುತ್ತಿದ್ದಾಳೆ ಈ ಭಾಮೆ . ಹಾಗಂತ ಟಾಲಿವುಡ್ ಮಂದಿ ಹೇಳ್ತಾ ಇದ್ದಾರೆ.ಈಗ ಒಪ್ಪಿರುವ ಚಿತ್ರಗಳನ್ನು ಪೂರೈಸಿದ  ಬಳಿಕ ಸರ್ಜರಿ ಮಾಡಿಸಿ ಕೊಳ್ಳುತ್ತಾಳಂತೆ.

ವೆಬ್ದುನಿಯಾವನ್ನು ಓದಿ