ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಕಲ್ಪನಾ ಚಿತ್ರವನ್ನು ನೋಡಿಯೇ ಇರುತ್ತೀರಾ? ಅದನ್ನು ನೆನೆಸಿಕೊಂಡರೆ ಎದೆ ಝಲ್ ಎನ್ನಿಸುತ್ತದೆ. ನಿಮ್ಮನ್ನು ಮತ್ತಷ್ಟು ಬೆಚ್ಚಿಬೀಳಿಸಲು ಕಲ್ಪನಾ- 2 ಸಿನಿಮಾ ಬರುತ್ತಿದ್ದು ಇದೇ ಜುಲೈ 15 ರಂದು ತೆರೆಗಪ್ಪಳಿಸುತ್ತಿದೆ.
ತಮಿಳಿನ 'ಕಾಂಚನಾ-2' ಚಿತ್ರದ ರೀಮೇಕ್ ಆಗಿರುವ ಈ ಚಿತ್ರದಲ್ಲಿ ಉಪೇಂದ್ರ ಅವರ ಜತೆಗೆ ಪ್ರಿಯಾಮಣಿ, ರಂಗಿತರಂಗ ಚೆಲುವೆ ಅವಂತಿಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅನಂತರಾಜು ಆಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತವಿದೆ.