Kamal Hassan: ತಪ್ಪು ಮಾಡಿಲ್ಲ ಕ್ಷಮೇನೂ ಕೇಳಲ್ಲ, ನಂಗೆ ಒತ್ತಡ ಹಾಕಬೇಡಿ ಎಂದ ಕಮಲ್ ಹಾಸನ್
ಥಗ್ಸ್ ಆಫ್ ಲೈಫ್ ಸಿನಿಮಾ ಪ್ರಚಾರಕ್ಕಾಗಿ ಊರೂರು ಸುತ್ತುತ್ತಿರುವ ಕಮಲ್ ಹಾಸನ್ ಗೆ ಈಗ ಎಲ್ಲಿ ಹೋದರೂ ಕನ್ನಡ ವಿವಾದಕ್ಕೆ ಸಂಬಂಧಿಸಿದ ಪ್ರಶ್ನೆಯೇ ಎದುರಾಗುತ್ತಿದೆ. ಕಮಲ್ ಇಂದಿನ ಒಳಗಾಗಿ ಕ್ಷಮೆ ಕೇಳದಿದ್ದರೆ ಅವರಿಗೆ ನಿಷೇಧ ಹೇರುತ್ತೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈಗಾಗಲೇ ಘೋಷಿಸಿದೆ.
ಹೀಗಾಗಿ ಇಂದು ಮಾಧ್ಯಮಗಳು ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಿದಾಗ ಮತ್ತೆ ದರ್ಪ ತೋರಿದ್ದಾರೆ. ನಾನು ತಪ್ಪು ಮಾಡಿಲ್ಲ. ನಾನು ತಪ್ಪು ಮಾಡಿದ್ದರೆ ಕ್ಷಮೆ ಕೇಳುತ್ತೇನೆ. ತಪ್ಪು ಮಾಡದೇ ಇದ್ದರೆ ಕ್ಷಮೆ ಕೇಳಲ್ಲ. ಇದು ನನ್ನ ಪಾಲಿಸಿ. ನನಗೆ ಒತ್ತಡ ಹಾಕಬೇಡಿ, ನಾನು ತಪ್ಪು ಮಾಡಿಲ್ಲ, ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.