ರಾಣಿ ಎಲಿಜಬೆತ್‌ರನ್ನು ಭೇಟಿ ಮಾಡಿದ ಕಮಲ್ ಹಾಸನ್

ಬುಧವಾರ, 1 ಮಾರ್ಚ್ 2017 (15:42 IST)
ಯುಕೆ-ಭಾರತ ಸಾಂಸ್ಕೃತಿಕ ವರ್ಷ 2017 ಬಂಕಿಂಗ್‍ಹ್ಯಾಮ್ ಪ್ಯಾಲೇಸ್‌ನಲ್ಲಿ ನಡೆಯುತಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ರಾಣಿ ಎಲಿಜಬೆತ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ನಟ ಕಮಲ್ ಹಾಸನ್ ಸಹ ಭಾಗಿಯಾಗಿದ್ದಾರೆ.
 
ಸೆಲೆಬ್ರಿಟಿಗಳಾದ ಸುರೇಶ್ ಗೋಪಿ, ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್, ಫ್ಯಾಷನ್ ಡಿಸೈನರ್ ಮನೀಶ್ ಅರೋರಾ ಮತ್ತು ಮನೀಶ್ ಮಲ್ಹೋತಾ, ಗಾಯಕ ಮತ್ತು ನಟ ಗುರುದಾಸ್ ಮನ್, ಸಿತಾರ್ ವಾದಕ ಅನೌಷ್ಕಾ ಶಂಕರ್ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
 
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ್ದಕ್ಕೆ ಕಮಲ್ ಹಾಸನ್ ಪ್ರಧಾನಿ ನರೇಂದ್ರ ಮೋದಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾಣಿ ಎಲಿಜಬೆತ್ ಕೈ ಕುಲುಕಿರುವ ಫೋಟೋ ಈಗ ಎಲ್ಲೆಡೆ ಹರಿದಾಡುತ್ತಿದೆ. 1977ರಲ್ಲಿ ರಾಣಿ ಎಲಿಜಬೆತ್ ಅವರು ಕಮಲ್ ಹಾಸನ್ ಅಭಿನಯದ ’ಮರುದನಾಯಗನ್’ ಚಿತ್ರ ಸೆಟ್ಟೇರಿದಾಗ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈಗ 20 ವರ್ಷಗಳ ಬಳಿಕ ಮತ್ತೆ ರಾಣಿಯನ್ನು ಭೇಟಿಯಾಗಿದ್ದಾರೆ ಕಮಲ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ