ಕಮಲ್ ಹಾಸನ್ ಇತ್ತೀಚಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಚಿತ್ರಗಳನ್ನು ಮಾಡುತ್ತಿದ್ದಾರೆ. ಈ ವರ್ಷ ಕಮಲ್ ಅವರ ನಟನೆಯ ಮೂರು ಚಿತ್ರಗಳು ಬಿಡುಗಡೆ ಆಗುತ್ತಿದೆ. ಅಂದರೆ ಕಮಲ್ ಅವರು ಅದ್ಯಾವ ಪರಿ ಕಷ್ಟ ಪಡುತ್ತಿದ್ದಾರೆ ಎನ್ನುವ ಸಂಗತಿ ಸ್ಪಷ್ಟವಾಗುತ್ತದೆ. ಇತ್ತೀಚಿಗೆ ಅವರು ಪತ್ರಿಕೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಾನು ನಟಿಸಿರುವ ಉತ್ತಮ ವಿಲನ್, ವಿಶ್ವರೂಪಂ 2 ,ಪಾಪ ನಾಶನಂ ಬಗ್ಗೆ ಅನೇಕ ಆಸಕ್ತಿಕರ ಸಂಗತಿಗಳನ್ನು ಹೊರ ಹಾಕಿದ್ದಾರೆ.
ಈ ಸಮಯದಲ್ಲಿ ಮಾತನಾಡುತ್ತ ರಜನಿ ಕಾಂತ್ ಅವರ ಚಿತ್ರದ ಬಗ್ಗೆ ಮಾತಾಡುತ್ತ ಕೆಲವು ಆಸಕ್ತಿಕರ ಸಂಗತಿಗಳನ್ನು ಹೇಳಿದ್ದಾರೆ. ಬಾಬ ಚಿತ್ರ ಸೋತಾಗ ರಜನಿಕಾಂತ್ ಅವರು ಹಂಚಿಕೆದಾರರಿಗೆ ಹಣ ವಾಪಸ್ಸು ನೀಡಿದ್ದರು ಆಗ ಎಲ್ಲರು ಅವರ ಈ ನಡೆ ಬಗ್ಗೆ ಮಾತಾಡಿದ್ದರು ಆದರೆ ರಜನಿಯ ಆ ರೀತಿ ಒಳ್ಳೆತನದ ಪ್ರಭಾವ ಈಗ ಅವರ ಲಿಂಗಾ ಚಿತ್ರದ ಸೋಲಿನ ಮೇಲೆ ಬಿದ್ದಿದೆ ಎನ್ನುವ ಸಂಗತಿಯನ್ನು ಹೇಳಿದ್ದಾರೆ.