ಕಾಣದಂತೆ ಮಾಯಾವಾದನು' ಸಿನಿಮಾ ರಿಲೀಸ್ ಆದ್ಮೇಲು ಹಾಡುಗಳದ್ದೇ ಅಬ್ಬರ..!

ಮಂಗಳವಾರ, 25 ಫೆಬ್ರವರಿ 2020 (13:33 IST)
ವಿಕಾಸ್ ನಟನೆಯ 'ಕಾಣದಂತೆ ಮಾಯಾವಾದನು' ಸಿನಿಮಾ ಈಗಾಗಲೇ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆಯೂ ಸಾಂಗ್ ಒಂದು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಯಾರ ಬಾಯಲ್ಲಿ ಕೇಳಿದ್ರು ಅದೇ ಹಾಡು ಗುನುಗುವಂತೆ ಮೋಡಿ ಮಾಡಿದೆ. ಯಾವ ಮೊಬೈಲ್ ರಿಂಗ್ ಟೋನ್ ಕೇಳಿದ್ರು ಅದೇ ಹಾಡು ರಿಂಗಾಯಿಸುತ್ತಿದೆ. ಅಷ್ಟರ ಮಟ್ಟಿಗೆ 'ಕಾಣದಂತೆ ಮಾಯಾವಾದನು' ಸಿನಿಮಾದ ಹಾಡುಗಳು ಎಲ್ಲರಿಗೂ ಹುಚ್ಚೆಬ್ಬಿಸಿದೆ.
'ಮಿಂಚಿನ ಬಳ್ಳಿ, ಬಣ್ಣವ ಚೆಲ್ಲಿ' ಎಂಬ ಹಾಡು ಎಲ್ಲೆಡೆ ವೈರಲ್ ಆಗಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈಗಲೂ ಕೂಡ ಲೀಡಿಂಗ್ ನಲ್ಲಿ ಈ ಹಾಡು ಓಡ್ತಾ ಇದೆ. ಜಯಂತ್ ಕಾಯ್ಕಿಣಿ ಅವರು ಬರೆದಿರುವ ಸಾಹಿತ್ಯಕ್ಕೆ ಗುಮ್ಮಿನೇನಿ ವಿಜಯ್ ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ನಿಶ್ಕಲ್ಮಶ ಪ್ರೀತಿಯೊಂದು ಎಲ್ಲರಿಗೂ ಇಷ್ಟವಾಗಿದೆ. ತುಂಬಾ ಪ್ರೀತಿಸುವ ಹೃದಯ ಸತ್ತರೂ ಜೊತೆಯಲ್ಲಿರುತಚತೆ ಎಂಬ ಭಾವ ಮೂಡಿಸುತ್ತಿದೆ. ಹಾಡಿನಲ್ಲಿ ಪ್ರೀತಿಯ ಆಲಾಪನೆ ಇದ್ದು, ಪ್ರೇಮಿಗಳ ದಿನ ಬೇರೆ ಹತ್ತಿರವಿರುವ ಕಾರಣ, ವ್ಯಾಲೆಂಟೈನ್ಸ್ ಡೇ ಗೆ ಒಂದೊಳ್ಳೆ ಹಾಡು ಕೂಡ ಆಗಿದೆ. ಹಾಡಿನಲ್ಲಿ ನೋವಿದ್ದರು, ಮಧುರವಾದ ಪ್ರೀತಿ ಎಲ್ಲರ ಮನ ತಟ್ಟುತ್ತಿದೆ.
 
ಮೊದಲ ಬಾರಿಗೆ ಬೆಳ್ಳಿ ತೆರೆ ಮೇಲೆ ನಾಯಕನಾಗಿ ಕಾಣಿಸಿಕೊಂಡಿದ್ದ ವಿಕಾಸ್ 'ಕಾಣದಂತೆ ಮಾಯಾವಾದನು' ಸಿನಿಮಾದಿಂದ ಗೆಲುವು ಕಂಡಿದ್ದಾರೆ. ಒಬ್ಬ ಒಳ್ಳೆ ನಟನಾಗುವ ಕ್ವಾಲಿಟಿ ಇದೆ ಎಂಬುದನ್ನು ಈ ಸಿನಿಮಾದಿಂದ ಪ್ರೂವ್ ಮಾಡಿದ್ದಾರೆ. ಸಿಂಧೂ ಲೋಕನಾಥ್ ನಾಯಕಿಯಾಗಿ ಅದ್ಭುತ ಅಭಿನಯ ಮಾಡಿದ್ದಾರೆ. ರಿಲೀಸ್ ಆದಾಗಿ‌ನಿಂದ ಸಿನಿಮಾ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ. ರಾಜ್ ಪತ್ತಿಪಾಟಿ ಸಿನಿಮಾ ನಿರ್ದೇಶನ ಮಾಡಿದ್ದು, ಸೋಮ್ ಸಿಂಗ್ ಮತ್ತು ಚಂದ್ರಶೇಖರ್ ನಾಯ್ಡು ಸಿನಿಮಾ ನಿರ್ಮಾಣ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ